ದೇಶಿಯ ಶೇರುಪೇಟೆ ವಹಿವಾಟು ಕುಸಿತದ ಹಿನ್ನೆಲೆಯಲ್ಲಿ ಬಂಡವಾಳದ ಒಳಹರಿವು ಇಳಿಕೆಯಾಗಿದ್ದರಿಂದ ಡಾಲರ್ ಎದುರಾಗಿ ರೂಪಾಯಿ 33 ಪೈಸೆ ಕುಸಿತ ಕಂಡಿದೆ. ಏಷ್ಯಾದ ಇತರ ಕರೆನ್ಸಿಗಳ ಎದುರು ಡಾಲರ್ ಪ್ರಬಲವಾಗಿದ್ದರಿಂದ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್‌ಗೆ 50.91 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 33ಪೈಸೆ ಕುಸಿತ ಕಂಡಿದ್ದರಿಂದ 50.58/59 ರೂಪಾಯಿಗಳಿಗೆ ತಲುಪಿದೆ. ಏಷ್ಯಾದ ದುರ್ಬಲ ವಹಿವಾಟಿನಿಂದಾಗಿ ಅಮುದುದಾರರು ಹಾಗೂ ಬ್ಯಾಂಕ್‌ಗಳಿಂದ ಡಾಲರ್‌ಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ. ಗುರುವಾರದ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 15 ಪೈಸೆ ಏರಿಕೆಯಾಗಿ 50.58/59 ರೂಪಾಯಿಗಳಿಗೆ ತಲುಪಿತ್ತು. ಜಪಾನ್‌ನ ನಿಕೈ ಹಾಗೂ ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಶೇರುಪೇಟೆಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.2.5 ರಷ್ಟು ಕುಸಿತ ಕಂಡಿವೆ. |