ಕಾರ್ಪೋರೇಟ್ ಕಂಪೆನಿಗಳು ವಿವಿಧ 24 ರೀತಿಯ ತೆರಿಗೆಗಳನ್ನು ಪಾವತಿಸಬೇಕಾಗಿದ್ದು ಕಾರ್ಪೋರೇಟ್ ತೆರಿಗೆಯನ್ನು ಶೇ.25 ಕ್ಕೆ ಇಳಿಕೆ ಮಾಡುವುದು ಅಗತ್ಯವಾಗಿದೆ ಎಂದು ಎಫ್‌ಐಸಿಸಿಐ-ಪಿಡಬ್ಲೂಸಿ ಅಧ್ಯಯನದ ವರದಿಯಲ್ಲಿ ಪ್ರಕಟಿಸಿದೆ.
ಕಾರ್ಪೋರೇಟ್ ತೆರಿಗೆಗಳು ಶೇ.25ಕ್ಕಿಂತ ಹೆಚ್ಚಳವಾಗಬಾರದು ಮತ್ತು ಡಿವಿಡೆಂಡ್ ವಿತರಮಾ ತೆರಿಗೆ ಶೇ.10 ಕ್ಕಿಂತ ಹೆಚ್ಚು ಮೀರಬಾರದು. ಇಲ್ಲವಾದಲ್ಲಿ ತೆರಿಗೆ ಕಾರ್ಪೋರೇಟ್ ಕಂಪೆನಿಗಳಿಗೆ ಭಾರವಾಗಲಿದೆ ಎಂದು ಎಫ್‌ಐಸಿಸಐ ಕಾರ್ಯದರ್ಶಿ ಜನರಲ್ ಅಮಿತ್ ಮಿಶ್ರಾ ಪ್ರಕಟಿಸಿದ ಅಧ್ಯಯನದ ವರದಿಯಲ್ಲಿ ಸರಕಾರವನ್ನು ಒತ್ತಾಯಿಸಿದೆ.
ಕಾರ್ಪೋರೇಟ್ ಕಂಪೆನಿಗಳು ತಮ್ಮ ಒಟ್ಟು ಆದಾಯದ ಶೇ.16 ರಷ್ಟನ್ನು ತೆರಿಗೆಗಾಗಿ ಪಾವತಿಸಬೇಕಾಗಿದೆ ಎಂದು ಅಧ್ಯಯನದ ಮೂಲಗಳು ತಿಳಿಸಿವೆ.
ಸಮೀಕ್ಷೆಯಿಂದಾಗಿ ಕೇಂದ್ರ ಸರಕಾರ ಮತ್ತು ಕಾರ್ಪೋರೇಟ್ ಕಂಪೆನಿಗಳು ಪರಸ್ಪರ ಚರ್ಚೆಯ ಮೂಲಕ ತೆರಿಗೆ ವ್ಯವಸ್ಥೆಯ ಬಗ್ಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಪಿಡಬ್ಲೂಸಿ ನಿರ್ದೇಶಕ ಕೇತನ್ ದಲಾಲ್ ಹೇಳಿದ್ದಾರೆ. |