ಸ್ಟೀಮ್ ಜನರೇಟರ್ ಉತ್ಪಾದನೆ ಹಾಗೂ ಸರಬರಾಜಿಗಾಗಿ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾದಿಂದ 345 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆಯಲಾಗಿದೆ ಎಂದು ಇಂಜಿನಿಯಂರಿಂಗ್ ದೈತ್ಯ ಕಂಪೆನಿ ಲಾರ್ಸನ್ ಆಂಡ್ ಟೌಬ್ರೋ ಹೇಳಿಕೆ ನೀಡಿದೆ.
ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಲಾರ್ಸನ್ ಆಂಡ್ ಟೌಬ್ರೋ, ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾಗೆ 700 ಮೆಗಾ ವ್ಯಾಟ್ ಸ್ಟೀಮ್ ಜನರೇಟರ್ ಉತ್ಪಾದನೆ ಹಾಗೂ ಸರಬರಾಜಿಗಾಗಿ 345 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆಯಲಾಗಿದೆ ಎಂದು ತಿಳಿಸಿದೆ.
ಉತ್ಪಾದಿಸಿದ ಸ್ಟೀಮ್ ಜನರೇಟರ್‌ಗಳನ್ನು ಕಾಕ್ರಾಪುರ್ ಅಟೋಮಿಕ್ ಪವರ್ ಪ್ರೋಜೆಕ್ಟ್‌ಗೆ ಸರಬರಾಜು ಮಾಡಲಾಗುವುದು ಲಾರ್ಸನ್ ಆಂಡ್ ಟೌಬ್ರೋ ಮಾಹಿತಿ ನೀಡಿದೆ.
ಇಲ್ಲಿಯವರೆಗೆ ಭಾರತದಲ್ಲಿ 540 ಮೆಗಾ ವ್ಯಾಟ್ ಸ್ಟೀಮ್ ಜನರೇಟರ್‌ಗಳನ್ನು ಮಾತ್ರ ಉತ್ಪಾದಿಸಲಾಗುತ್ತಿದ್ದು, ಪ್ರಸಕ್ತ 700 ಮೆಗಾ ವ್ಯಾಟ್ ಸ್ಟೀಮ್ ಜನರೇಟರ್‌ಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಕಂಪೆನಿ ಮಾಹಿತಿಯಲ್ಲಿ ಬಹಿರಂಗಪಡಿಸಿದೆ. |