ಕಳೆದ 2008ರಲ್ಲಿ 617.7 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿದ್ದ ದೇಶದ ಪ್ರಮುಖ ಔಷಧಿ ತಯಾರಿಕೆ ಸಂಸ್ಥೆಯಾದ ರಾನ್‌ಬಕ್ಸಿಗೆ ಪ್ರಸಕ್ತ ವರ್ಷದಲ್ಲಿ 1,044.8 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಂಪೆನಿಯ ಒಟ್ಟು ಆದಾಯ 2007ರಲ್ಲಿ 4,681.7 ಕೋಟಿ ರೂಪಾಯಿಗಳಾಗಿತ್ತು. ಪ್ರಸಕ್ತ ವರ್ಷದ ನಿವ್ವಳ ಆದಾಯದಲ್ಲಿ 4,261.9 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿಂದಿನ ವರ್ಷದ ವಹಿವಾಟಿನಲ್ಲಿ ಕ್ರೂಢೀಕೃತ 774.5 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿದ್ದ ರಾನ್‌ಬಕ್ಸಿ ಕಂಪೆನಿ ಪ್ರಸಕ್ತ ವರ್ಷದಲ್ಲಿ 951.2 ಕೋಟಿ ರೂಪಾಯಿ ನಿವ್ವಳ ನಷ್ಟ ಅನುಭವಿಸಿದೆ.
ಅಮೆರಿಕದ ಔಷಧಿ ಹಾಗೂ ಅಹಾರ ನಿಯಂತ್ರಕ ಸಂಸ್ಥೆ ರಾನ್‌ಬಕ್ಸಿಯ ಉತ್ಪನ್ನಗಳ ಮೇಲೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಕಂಪೆನಿ ತುಂಬಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿತ್ತು. |