ಅಮೆರಿಕದ ಜನರಲ್ ಮೋಟಾರ್ಸ್ ಕಾರ್ಪೋರೇಷನ್(ಜಿಎಂ) ಅಧ್ಯಕ್ಷ ಹಾಗೂ ಸಿಇಓ ಸ್ಥಾನಕ್ಕೆ ರಿಕ್ ವ್ಯಾಗನರ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ವ್ಯಾಗನರ್ ರಾಜೀನಾಮೆಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಒತ್ತಡವಿತ್ತು ಎನ್ನಲಾಗಿದೆ. ಇದೇ ವೇಳೆ ಜಿಎಂ ಸಂಸ್ಥೆಯ ನೂತನ ಸಿಇಓ ಆಗಿ ಫ್ರಿಟ್ಸ್ ಹೆಂಡರ್ಸನ್ ಅವರನ್ನು ನೇಮಕಗೊಳಿಸಲಾಗಿದೆ. |