ದೇಶಿಯ ಶೇರುಪೇಟೆ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ನಿರೀಕ್ಷೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 18 ಪೈಸೆ ಏರಿಕೆ ಕಂಡಿದೆ. ಏಷ್ಯಾದ ಇತರ ಕರೆನ್ಸಿಗಳ ಮುಂದೆ ಡಾಲರ್ ಮೌಲ್ಯ ದುರ್ಬಲವಾಗಿರುವುದು ರೂಪಾಯಿ ಮೌಲ್ಯ ಹೆಚ್ಚಳಕ್ಕೆ ಕಾರಣವಾಗಿದೆ.ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ ಎದುರಿಗೆ 51.00 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 18 ಪೈಸೆ ಏರಿಕೆಯಾಗಿ 51.18/19 ರೂಪಾಯಿಗಳಿಗೆ ತಲುಪಿದೆ. ದೇಶಿಯ ಶೇರುಪೇಟೆ ಚೇತರಿಕೆ ಹಾಗೂ ಏಷ್ಯಾದ ಇತರ ಕರೆನ್ಸಿಗಳ ಬೆಂಬಲದಿಂದಾಗಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ಸಾಧ್ಯತೆಗಳಿಂದಾಗಿ ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಫಾರೆಕ್ಸ್ ವಿತರಕರು ತಿಳಿಸಿದ್ದಾರೆ. |