ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಕುಸಿತ: ಎಂಜಿನಿಯರ‌್‌ಗಳ ಉದ್ಯೋಗಕ್ಕೆ ಕಂಟಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಕುಸಿತ: ಎಂಜಿನಿಯರ‌್‌ಗಳ ಉದ್ಯೋಗಕ್ಕೆ ಕಂಟಕ
ಜಾಗತಿಕ ಆರ್ಥಿಕ ಕುಸಿತ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ್ದರಿಂದ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸುಮಾರು 50 ಸಾವಿರ ಎಂಜಿನಿಯರ‌್‌ಗಳು ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಎಂಜಿನಿಯರಿಂಗ್ ಎಕ್ಸ್‌ಪೋರ್ಟರ್ಸ್‌ ಸಂಘ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷದವರೆಗೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವಾರ್ಷಿಕವಾಗಿ ಶೇ.35 ರಷ್ಟು ಅಭಿವೃದ್ಧಿಯತ್ತ ಏರಿಕೆ ಕಾಣುತ್ತಿತ್ತು. ಆದರೆ ಆರ್ಥಿಕ ಕುಸಿತದಿಂದಾಗಿ ಪ್ರಸಕ್ತ ವರ್ಷದಲ್ಲಿ ಶೇ.20 ರಷ್ಟು ಋಣಾತ್ಮಕದತ್ತ ಸಾಗಿದ್ದೇವೆ ಎಂದು ಇಇಪಿಸಿ ಇಂಡಿಯಾದ ಉಪಾಧ್ಯಕ್ಷ ಮಹೇಶ್ ಕೆ.ದೇಸಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಮತ್ತಷ್ಟು ಕುಸಿತ ಮುಂದುವರಿದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ 50 ಸಾವಿರ ಎಂಜಿನಿಯರ‌್‌ಗಳು ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಎಂಜಿನಿಯರಿಂಗ್ ಎಕ್ಸ್‌ಪೋರ್ಟರ್ಸ್‌ ಸಂಘದ ಶೇ.80 ರಷ್ಟು ಇಂಜಿನೀಯರ್‌ಗಳು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಉದ್ಯೋಗಿಗಳಾಗಿದ್ದು, ಅನೇಕ ಕಂಪೆನಿಗಳು ದುರ್ಬಲ ವಹಿವಾಟಿನಲ್ಲಿ ಕೂಡಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದ್ದಾರೆ.

ದೇಶದಲ್ಲಿ ತಮಿಳುನಾಡು ಎಂಜಿನಿಯರಿಂಗ್ ಕ್ಷೇತ್ರದ ಪ್ರಮುಖ ಕೇಂದ್ರವಾಗಿದ್ದರಿಂದ ಆರ್ಥಿಕ ಕುಸಿತದ ಪ್ರಭಾವ ಮೊದಲು ತಮಿಳುನಾಡಿಗೆ ಪ್ರಭಾವ ಬೀರಲಿದೆ. ನಂತರ ಮಹಾರಾಷ್ಟ್ರ,ಕರ್ನಾಟಕ, ಪಂಜಾಬ್ ಮತ್ತು ಹರಿಯಾಣಾ ರಾಜ್ಯಗಳಿಗೆ ವ್ಯಾಪಿಸಲಿದೆ ಎಂದು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಖರೀದಿ: ಸ್ಪೈಸ್ ಆರೋಪವನ್ನು ತಳ್ಳಿಹಾಕಿದ ಗುಪ್ತಾ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಜಿಎಂ ಸಿಇಓ ದಿಢೀರ್ ರಾಜೀನಾಮೆ
ಆರ್ಥಿಕ ವೃದ್ಧಿ ಶೇ.8: ಆರ್‌ಬಿಐ ಡೆಪ್ಯೂಟಿ ಗವರ್ನರ್
ಚಿನ್ನದ ದರದಲ್ಲಿ ಏರಿಕೆ
ಏರ್‌ ಇಂಡಿಯಾದಿಂದ ನ್ಯೂಯಾರ್ಕ್‌ಗೆ ನೇರ ವಿಮಾನ