ವಾಷಿಂಗ್ಟನ್ : ಭಾರತ ಮತ್ತು ಚೀನಾ ಸೇರಿದಂತೆ ಜಾಗತಿಕ ಆರ್ಥಿಕ ಬಲಾಢ್ಯ ರಾಷ್ಟ್ರಗಳು ಪ್ರಸಕ್ತ ಎದುರಾಗಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಮಹತ್ತರ ಪಾತ್ರವಹಿಸಿ ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳಿಗೆ ಬೆಂಬಲ ನೀಡುವುದು ಪ್ರಮುಖ ಜವಾಬ್ದಾರಿಯಾಗಿದೆ ಎಂದು ಅಮೆರಿಕ ಹೇಳಿಕೆ ನೀಡಿದೆ.
ಜಾಗತಿಕ ಆರ್ಥಿಕತೆ ನಿರಂತರ ಕುಸಿತದತ್ತ ಸಾಗುತ್ತಿದ್ದು, ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಭಾರತದ ಮಹತ್ತರ ಪಾತ್ರ ನಿರ್ವಹಿಸುತ್ತದೆ ಎಂದು ನಿರೀಕ್ಷಿಸುವುದಾಗಿ ಅಮೆರಿಕದ ಖಜಾನೆ ಇಲಾಖೆಯ ಕಾರ್ಯದರ್ಶಿ ತಿಮೋತಿ ಗೇಟೆನರ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ದಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಸಂದರ್ಭದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ತಿಮೋತಿ ಮಾತನಾಡುತ್ತಿದ್ದರು.
ಜಾಗತಿಕ ಆರ್ಥಿಕ ಕುಸಿತ ತಡೆಗಾಗಿ ಆಯಾ ದೇಶದ ಸರಕಾರಗಳು ನಿರ್ಧರಿಸಬೇಕಾಗಿದೆ ಎಂದು ತಿಮೋತಿ ಗೆಟ್ನರ್ ಹೇಳಿದ್ದಾರೆ. |