ಆರ್ಥಿಕ ಹಿಂಸರಿತದಿಂದ ಹೊರಬರಲು ಅಮೆರಿಕ ಸರ್ಕಾರವು ಬೃಹತ್ ಪ್ಯಾಕೇಜ್‌ಗಳನ್ನು ಕೈಗೊಂಡಿದ್ದರೂ ಅದು ಪರಿಣಾಮಕಾರಿ ಪ್ರಭಾವವನ್ನು ಬೀರದೆ, ಹಿಂಸರಿತವು ಎಪ್ರಿಲ್ ತಿಂಗಳಿಗೆ ಸತತ 17 ತಿಂಗಳಿಗೆ ಕಾಲಿರಿಸಿದ್ದು, ಇದು 1930 ರಿಂದೀಚೆಗೆ ಅಮೆರಿಕವನ್ನು ಕಾಡಿದ ಅತಿ ದೊಡ್ಡ ಆರ್ಥಿತ ಹಿಂಸರಿತವಾಗಿದೆ.
ಅಮೆರಿಕವು 2007ರ ಡಿಸೆಂಬರ್‌ನಲ್ಲಿ ಅಧಿಕೃತವಾಗಿ ಆರ್ಥಿಕ ಹಿಂಸರಿತ ಪ್ರವೇಶಿಸಿತ್ತು.
ಎಪ್ರಿಲ್ 2ರಂದು ಜಿ-20 ಶೃಂಗ ಸಮ್ಮೇಳನ ಲಂಡನ್‌ನಲ್ಲಿ ನಡೆಯಲಿದ್ದು, ಇಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟನ್ನು ತೊಡೆದು ಹಾಕಲು ಉಪಾಯಗಳ ಕುರಿತು ಚರ್ಚೆ ನಡೆಸಲಾಗುವುದು.
ಆರ್ಥಿಕ ಮುಗ್ಗಟ್ಟನ್ನು ಸರಿದೂಗಿಸಲು ಅಮೆರಿಕ ಸರ್ಕಾರವು ಬಿಲಿಯಾನುಗಟ್ಟಲೆ ಡಾಲರುಗಳನ್ನು ಹರಿಬಿಟ್ಟಿದ್ದು, 787 ಶತಕೋಟಿ ಡಾಲರುಗಳ ಬೃಹತ್ ಯೋಜನೆಗಳನ್ನು ಕೈಗೊಂಡಿದೆ. |