ರಾಷ್ಟ್ರದಲ್ಲಿನ ಪ್ರಸ್ತುತ ರಾಜಕೀಯ ಹಾಗೂ ಭದ್ರತಾ ಪರಿಸ್ಥಿತಿಗಳು ಆರ್ಥಿಕ ಅನಿಶ್ಚಿತತೆಗೆ ಪ್ರೇರಣೆ ನೀಡಿವೆ ಎಂದು ಪಾಕಿಸ್ತಾನದ ಅಧಿಕಾರಿಗಳು ಒಪ್ಪಿಕೊಂಡಿರುವಂತೆಯೇ, ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಪಾಕಿಸ್ತಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ 847.1 ದಶಲಕ್ಷ ಡಾಲರುಗಳ ಹಣಕಾಸು ನೆರವನ್ನು ಒದಗಿಸಿದೆ.
"ಪ್ರಸಕ್ತ ರಾಜಕೀಯ ಮತ್ತು ಭದ್ರತಾ ಸ್ಥಿತಿಯು ಹಣಕಾಸು ಮತ್ತು ಹೂಡಿಕಾ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆಯಲ್ಲದೆ ಅದು ಹಣಕಾಸು ಅಪಾಯವನ್ನು ತಂದಿರಿಸುತ್ತದೆ" ಎಂದು ಪಾಕಿಸ್ತಾನದಲ್ಲಿ ಐಎಂಎಫ್ ಮಿಶನ್ ಮುಖ್ಯಸ್ಥ ಅದ್ನಾನ್ ಮಜರೇಯಿ ಹೇಳಿದ್ದಾರೆ. ಅವರು ಐಎಂಎಫ್ ಕಾರ್ಯಕಾರಿ ಮಂಡಳಿಯ ಪರಾಮರ್ಷೆಯ ಬಳಿಕ ಮಾಧ್ಯಮಗಳೊಂದಿಗೆ ಟೆಲಿ ಕಾನ್ಫರೆನ್ಸ್‌ನಲ್ಲಿ ಮಾತನಾಡುತ್ತಿದ್ದರು.
ಇದಲ್ಲದೆ, ಕೆಲವು ವಸ್ತುಗಳ ಆಮದಿನ ಮೇಲೆ ಹೇರಿರುವ ನಿರ್ಬಂಧವನ್ನು ತೊಡೆದು ಹಾಕುವಂತೆ ಪಾಕಿಸ್ತಾನ ಮಾಡಿರುವ ಮನವಿಗೂ ಮಂಡಳಿಯು ಅನುಮತಿ ನೀಡಿದೆ. |