ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಹೆಚ್ಎಎಲ್)ನ ಮುಖ್ಯಸ್ಥರಾಗಿ ಕನ್ನಡಿಗ ಅಶೋಕ್ ನಾಯಕ್ ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಶೋಕ್ ಅವರು 15 ನೇ ಮುಖ್ಯ ಅಧಿಕಾರಿಯಾಗಿ ಪದಗ್ರಹಣ ಮಾಡಿದರು.
ನಿರ್ಗಮನ ಮುಖ್ಯಸ್ಥ ಅಶೋಕ್ ಬವೇಜಾ ಅವರು ನೂತನವಾಗಿ ನೇಮಕಗೊಂಜ ಅಶೋಕ್ ನಾಯಕ್ ಅವರಿಗೆ ಶುಭ ಹಾರೈಸಿದರು.
ಕರ್ನಾಟಕದ ಹೊನ್ನಾವರಮೂಲದ ಅಶೋಕ್ ನಾಯಕ್ , ಬೆಂಗಳೂರು ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದಿದ್ದರು. 1973 ರಲ್ಲಿ ಮ್ಯಾನೇಜ್ ಮೆಂಟ್ ಟ್ರೈನಿ ಆಗಿ ಹೆಚ್ ಎ ಎಲ್ ಸೇರಿದರು. ಮೂರು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸ್ಥಾನ ಮಾನಗಳನ್ನು ಕಂಡವರು.
ಏರ್ ಕ್ರಾಫ್ಟ್ ವಿಭಾಗದ ಪ್ರಧಾನ ವ್ಯವಸ್ಥಾಪಕ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಹೆಚ್ ಎ ಎಲ್ ನ ಉತ್ಪನ್ನಗಳ ರಫ್ತು ಹೆಚ್ಚಳ ಸಾಧನೆ ಕಾರಣರಾದ ಅಶೋಕ್ ಹಾಗೂ ಅವರ ತಂಡ ಜಗ್ವಾರ್, ಲಕ್ಷ್ಯ , ಹಾಕ್ ಮುಂತಾದ ಯುದ್ಧ ವಿಮಾನ, ಲಘು ವಿಮಾನ ವಿನ್ಯಾಸ, ತಯಾರಿಸಿ ದೇಶಕ್ಕೆ ಉತ್ತಮ ಕೊಡಗೆ ನೀಡಿದೆ. |