ಏಷ್ಯಾ ತೈಲ ಮಾರುಕಟ್ಟೆಯಲ್ಲಿ ತೈಲಬೆಲೆ ಇಳಿಮುಖ ಕಾಣುತ್ತಿದ್ದರೆ, ಭಾರತದಲ್ಲಿ ಏವಿಯೇಷನ್ ಟರ್ಬೈನ್ ಫ್ಯುಯೆಲ್(ಎಟಿಎಫ್) ಬೆಲೆ ಕಿಲೋಗೆ ಮತ್ತೆ 2,750ರೂ.ಗಳಷ್ಟು ಹೆಚ್ಚಳ ಕಂಡಿದೆ.
ಕಳೆದ 15ದಿನಗಳಲ್ಲಿ ವಿಮಾನ ಇಂಧನ ಬೆಲೆ ಎರಡನೇ ಬಾರಿ ಹೆಚ್ಚಳ ಕಂಡಂತಾಗಿದೆ. ಮಂಗಳವಾರ ರಾತ್ರಿಯಿಂದಲೇ ಅನ್ವಯವಾಗುವಂತೆ ವಿಮಾನ ಇಂಧನ ಕಿಲೋಗೆ 27,274.95ರೂ. ಇದ್ದು 29, 926ರೂ.ಹೆಚ್ಚಳ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಅಂತಾರಾಷ್ಟ್ರೀಯವಾಗಿ ದರ ಏರಿಕೆ ಆಗಿರುವುದರಿಂದಾಗಿ ಇಂಧನ ದರದಲ್ಲಿ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಕಳೆದ ವರ್ಷದ ಸೆಪ್ಟೆಂಬರ್‌ವರೆಗೆ ವಿಮಾನ ಇಂಧನ ದರವನ್ನು 11ಬಾರಿ ಇಳಿಕೆ ಮಾಡಲಾಗಿತ್ತು. ಏತನ್ಮಧ್ಯೆ ಇಂಧನ ಕಂಪೆನಿಗಳು ಜನವರಿ 16ರಿಂದ ಎಟಿಎಫ್ ಬೆಲೆಯಲ್ಲಿ ಶೇ.3.3ರಷ್ಟು ಹೆಚ್ಚಳ ಮಾಡಿರುವುದರಿಂದ ಏರಿಕೆ ಮಾಡಲಾಗಿದೆ ಎಂದು ವಿವರಿಸಿದೆ. |