ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 300 ಸತ್ಯಂ ನೌಕರರು ಬ್ಯಾಂಕಾಫ್ ಅಮೆರಿಕಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
300 ಸತ್ಯಂ ನೌಕರರು ಬ್ಯಾಂಕಾಫ್ ಅಮೆರಿಕಕ್ಕೆ
ತನ್ನ ವಂಚನೆಯ ಮೂಲಕ ವಿಶ್ವವ್ಯಾಪಿ ಸಂಚಲನೆ ಮ‌ೂಡಿಸಿದ್ದ ಸತ್ಯಂ ಕಂಪ್ಯೂಟರ್ ಸರ್ವೀಸಸ್‌ನ ಸುಮಾರು 250ರಿಂದ 300 ನೌಕರರು ಬ್ಯಾಂಕ್ ಆಫ್ ಅಮೆರಿಕಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಬುಧವಾರ ಪತ್ರಿಕೆಯೊಂದು ವರದಿ ಮಾಡಿದೆ.

ಈ ನೌಕರರು ಸತ್ಯಂ ಸಂಸ್ಥೆಯು ಮೆರಿಲ್ ಲಿಂಚ್ ಸಂಸ್ಥೆಗಾಗಿ ನಿರ್ವಹಿಸುತ್ತಿದ್ದ ಪ್ರಾಜೆಕ್ಟ್‌ನಲ್ಲಿ ತೊಡಗಿಕೊಂಡಿದ್ದರು. ಸಬ್‌ಪ್ರೈಂ ಬಿಕ್ಕಟ್ಟಿಗೀಡಾಗಿದ್ದ ಈ ಬ್ಯಾಂಕನ್ನು ಅಮರಿಕ ಸರ್ಕಾರ ತನ್ನ ಆಧೀನಕ್ಕೆ ತೆಗೆದುಕೊಂಡಿತ್ತು.

ಸತ್ಯಂ ಹಗರಣ ಬಯಲಿಗೆ ಬಂದ ಬಳಿಕ ಮೆರಿಲ್ ಈ ಪ್ರಾಜೆಕ್ಟಿನ ನವೀಕರಣ ಮಾಡಿರಲಿಲ್ಲ. ಇದೀಗ ದತ್ತಾಂಶ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಬೆಂಬಲವನ್ನು ಬ್ಯಾಂಕು ಆಂತರಿಕವಾಗಿ ಪಡೆಯಲಿದೆ ಎಂದು ಪತ್ರಿಕೆ ಹೇಳಿದೆ.

ಪ್ರಥಮಹಂತದಲ್ಲಿ ನೌಕರರು ಎಪ್ರಿಲ್ 2ರಿಂದ 8ರೊಳಗಾಗಿ ಸೇರ್ಪಡೆಯಾಗಲಿದ್ದಾರೆ. ಇವರಿಗೆ ಶೇ.10ರಷ್ಟು ವೇತನ ಹೆಚ್ಚಳ ಹಾಗೂ ಸೇರ್ಪಡೆಯ ಬೊನಸ್ ನೀಡಲಾಗುವುದು ಎಂದು ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಮಾನ ಇಂಧನ ಬೆಲೆ ಮತ್ತಷ್ಟು ದುಬಾರಿ
ಏಪ್ರಿಲ್ 1ರ ವೈರಸ್ ಬಂತೇ? ಆತಂಕ ಬೇಡ!
ಎಚ್‌‌ಎಎಲ್ ಮುಖ್ಯಸ್ಥರಾಗಿ ಕನ್ನಡಿಗ ನಾಯಕ್ ನೇಮಕ
ಆರ್ಥಿಕ ಹಿಂಜರಿತಕ್ಕೆ ಆರ್ಥಿಕ ಸಂಸ್ಥೆಗಳೇ ಕಾರಣ: ಮುಖರ್ಜಿ
ಅಶೋಕ್ ನಾಯಕ್ ಎಚ್‌ಎಎಲ್ ಅಧ್ಯಕ್ಷ
ವಿಜಯ ಬ್ಯಾಂಕ್ ಬಡ್ಡಿದರ ಇಳಿಕೆ