ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿತ್ತೀಯ ಉತ್ತೇಜನಕ್ಕೆ ಸಿಂಗ್ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿತ್ತೀಯ ಉತ್ತೇಜನಕ್ಕೆ ಸಿಂಗ್ ಕರೆ
ವಿಶ್ವ ಆರ್ಥಿಕ ನಿಧಾನಗತಿಯ ವಿರುದ್ಧ ಹೋರಾಡಲು ವಿತ್ತೀಯ ಉತ್ತೇಜನಕಾರಿ ಪ್ಯಾಕೇಜುಗಳನ್ನು 2010ರ ತನಕ ಮುಂದುವರಿಸುವಂತೆ ಮತ್ತು ಹಣಕಾಸು ವಲಯಗಳು ಸೇರಿದಂತೆ ಎಲ್ಲಾ ವಿಧದ ರಕ್ಷಣಾತ್ಮಕತೆಗಳನ್ನು ತೊಡೆದು ಹಾಕುವಂತೆ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವದ ಆರ್ಥಿಕತೆಗಳನ್ನು ಒತ್ತಾಯಿಸಿದ್ದಾರೆ.

ವಿತ್ತೀಯ ಉತ್ತೇಜಕತೆ ಕುರಿತಂತೆ ಭಾರತೀಯ ನಿಲುವಿನ ಕುರಿತು ಸಿಂಗ್ ಅವರನ್ನು ಪ್ರಶ್ನಿಸಿದಾಗ ಉತ್ತರಿಸಿದ ಅವರು "ವಿಶ್ವದ ಬೃಹತ್ ಆರ್ಥಿಕತೆಗಳು 2009ರಲ್ಲಿ ಯೋಜಿಸಿರುವ ವಿತ್ತೀಯ ಉತ್ತೇಜನವು ವಿಶ್ವದ ಜಿಡಿಪಿಯ ಶೇ. 2ರಷ್ಟು ಎಂಬ ಐಎಂಎಫ್ ನಿರ್ದೇಶಕರ ಪತ್ರವನ್ನು ನಾನು ನೋಡಿದ್ದೇನೆ. ಇದು ಬಹುತೇಕ ಸಮರ್ಪಕವಾಗಿದ್ದರೂ, ಅದು ಸ್ಥಿರವಾಗಿ 2010ರ ತನಕ ಮುಂದುವರಿಯುವಂತೆ ನೋಡಿಕೊಳ್ಳುವುದು ಅತ್ಯಗತ್ಯ" ಎಂದು ಹೇಳಿದ್ದಾರೆ.

ಜಿ-20 ಶೃಂಗಸಮ್ಮೇಳನದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಸಿಂಗ್ ಅವರು "ರಕ್ಷಣಾತ್ಮಕತೆಯನ್ನು ತೊಡೆದು ಹಾಕಬೇಕು. ವಸ್ತುಗಳು ಮಾತ್ರವಲ್ಲದೆ ಸೇವೆಗಳ ವ್ಯಾಪ್ತಿಯಲ್ಲೂ ರಕ್ಷಣಾತ್ಮಕತೆಯನ್ನು ಇಲ್ಲವಾಗಿಸಬೇಕು. ವಿತ್ತೀಯ ರಕ್ಷಣಾತ್ಮಕತೆಯೂ ಸಹ ಒಳ್ಳೆಯದಲ್ಲ ಮತ್ತು ಇದನ್ನೂ ತೊಡೆದುಹಾಕಬೇಕು" ಎಂದು ಸಿಂಗ್ ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
300 ಸತ್ಯಂ ನೌಕರರು ಬ್ಯಾಂಕಾಫ್ ಅಮೆರಿಕಕ್ಕೆ
ವಿಮಾನ ಇಂಧನ ಬೆಲೆ ಮತ್ತಷ್ಟು ದುಬಾರಿ
ಏಪ್ರಿಲ್ 1ರ ವೈರಸ್ ಬಂತೇ? ಆತಂಕ ಬೇಡ!
ಎಚ್‌‌ಎಎಲ್ ಮುಖ್ಯಸ್ಥರಾಗಿ ಕನ್ನಡಿಗ ನಾಯಕ್ ನೇಮಕ
ಆರ್ಥಿಕ ಹಿಂಜರಿತಕ್ಕೆ ಆರ್ಥಿಕ ಸಂಸ್ಥೆಗಳೇ ಕಾರಣ: ಮುಖರ್ಜಿ
ಅಶೋಕ್ ನಾಯಕ್ ಎಚ್‌ಎಎಲ್ ಅಧ್ಯಕ್ಷ