ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ಯಾಂಕಿನಿಂದ ನಗದೀಕರಣ ತೆರಿಗೆ: ಇನ್ನು ತೆರಬೇಕಾಗಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕಿನಿಂದ ನಗದೀಕರಣ ತೆರಿಗೆ: ಇನ್ನು ತೆರಬೇಕಾಗಿಲ್ಲ
50 ಸಾವಿರ ರೂ. ಮೇಲ್ಪಟ್ಟು ಬ್ಯಾಂಕುಗಳಿಂದ ಹಣ ತೆಗೆಯಲು ಇದುವರೆಗೆ ಗ್ರಾಹಕರ ಮೇಲೆ ವಿಧಿಸಲಾಗಿದ್ದ ಮೇಲ್ತೆರಿಗೆ ರದ್ದುಗೊಳಿಸಲಾಗಿದೆ.

ದಿನವೊಂದಕ್ಕೆ 50 ಸಾವಿರ ರೂ.ಗೆ ಮೇಲ್ಪಟ್ಟು (ವೈಯಕ್ತಿಕ) ಮತ್ತು ಯಾವುದೇ ಶೆಡ್ಯೂಲ್ಡ್ ಬ್ಯಾಂಕಿನಲ್ಲಿರುವ ಖಾತೆಯಿಂದ ಇತರರು 1 ಲಕ್ಷ ರೂ.ಗಿಂತ ಹೆಚ್ಚು ಹಣ ನಗದೀಕರಿಸಿದರೆ ಶೇ.0.1 ರಷ್ಟು ಮೇಲ್ತೆರಿಗೆ ವಿಧಿಸಿ 2005ರಲ್ಲಿ ಸರಕಾರ ಆದೇಶ ಜಾರಿಗೊಳಿಸಿತ್ತು.

2008-09 ಬಜೆಟ್ ಭಾಷಣದಲ್ಲಿ ಅಂದಿನ ವಿತ್ತ ಮಂತ್ರಿ ಪಿ.ಚಿದಂಬರಂ ಅವರು ಘೋಷಿಸಿದಂತೆ, ಏಪ್ರಿಲ್ 1ರಿಂದ ಈ ಬ್ಯಾಂಕಿಂಗ್ ನಗದು ವಹಿವಾಟು ತೆರಿಗೆ (ಬಿಸಿಸಿಟಿ) ಯನ್ನು ಹಿಂತೆಗೆದುಕೊಳ್ಳಲಾಗಿದೆ.

ದಾಖಲೆಯಿಲ್ಲದ ಹಣವನ್ನು ಹೊರಗೆಳೆಯಲು ಮತ್ತು ಅದು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬಿತ್ಯಾದಿ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಈ ಲೆವಿಯನ್ನು 2005ರಲ್ಲಿ ಹೇರಲಾಗಿತ್ತು. ಇದನ್ನು ಆದಾಯದ ಉದ್ದೇಶದಿಂದ ಹೇರಿರಲಿಲ್ಲವಾದರೂ, ಈ ತೆರಿಗೆಯಿಂದಾಗಿ 2008-09ರ ಅವಧಿಯಲ್ಲಿ ಸರಕಾರಕ್ಕೆ 600 ಕೋಟಿ ರೂಪಾಯಿಯಷ್ಟು ಆದಾಯ ದೊರೆತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿತ್ತೀಯ ಉತ್ತೇಜನಕ್ಕೆ ಸಿಂಗ್ ಕರೆ
300 ಸತ್ಯಂ ನೌಕರರು ಬ್ಯಾಂಕಾಫ್ ಅಮೆರಿಕಕ್ಕೆ
ವಿಮಾನ ಇಂಧನ ಬೆಲೆ ಮತ್ತಷ್ಟು ದುಬಾರಿ
ಏಪ್ರಿಲ್ 1ರ ವೈರಸ್ ಬಂತೇ? ಆತಂಕ ಬೇಡ!
ಎಚ್‌‌ಎಎಲ್ ಮುಖ್ಯಸ್ಥರಾಗಿ ಕನ್ನಡಿಗ ನಾಯಕ್ ನೇಮಕ
ಆರ್ಥಿಕ ಹಿಂಜರಿತಕ್ಕೆ ಆರ್ಥಿಕ ಸಂಸ್ಥೆಗಳೇ ಕಾರಣ: ಮುಖರ್ಜಿ