ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2008-09ರಲ್ಲಿ 2.50 ಲಕ್ಷ ಕೋಟಿ ಕೃಷಿ ಸಾಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2008-09ರಲ್ಲಿ 2.50 ಲಕ್ಷ ಕೋಟಿ ಕೃಷಿ ಸಾಲ
PTI
ಕೃಷಿ ಸಾಲವು 2008-09ರ ಸಾಲಿನಲ್ಲಿ 2.50 ಲಕ್ಷ ಕೋಟಿ ತಲುಪಲಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಈ ಅವಧಿಗೆ 2.80 ಲಕ್ಷ ಕೋಟಿ ಗುರಿಯನ್ನು ಹೊಂದಲಾಗಿದ್ದರೂ, ನಿಗದಿತ ಗುರಿಯನ್ನು ತಲುಪಲಾಗದು ಎನ್ನಲಾಗಿದೆ.

ದತ್ತಾಂಶಗಳ ಪ್ರಕಾರ ಫೆಬ್ರವರಿಯ ತನಕ 2.13 ಲಕ್ಷ ಕೋಟಿ ತಲುಪಿದ್ದು, 2008-09 ವಿತ್ತೀಯ ವರ್ಷದಲ್ಲಿ 2.50 ಲಕ್ಷ ಕೋಟಿ ತಲುಪಿರಬಹುದು ಎಂಬುದಾಗಿ ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಿಖರ ಮಾಹಿತಿಯು ಯಾವಾಗ ದೊರೆಯುತ್ತದೆ ಎಂಬುದಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಅಂಕಿ ಅಂಶಗಳು ಅಂದಾಜು ಆಧಾರಿತವಾಗಿದೆ. ಎಲ್ಲಾ ಬ್ಯಾಂಕುಗಳಿಂದ ಮಾಹಿತಿ ಸಂಗ್ರಹಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದು ನುಡಿದರು.

ಸರ್ಕಾರವು ಈ ಆರ್ಥಿಕ ವರ್ಷದಲ್ಲಿ 2.80ಲಕ್ಷ ಕೋಟಿ ಕೃಷಿ ಸಾಲ ವಿತರಣೆಯ ಗುರಿಯನ್ನು ಹಾಕಿಕೊಂಡಿತ್ತು. ಇವುಗಳಲ್ಲಿ ವಾಣಿಜ್ಯ ಬ್ಯಾಂಕುಗಳ ಪಾಲು 1.95 ಲಕ್ಷ ರೂಪಾಯಿ ಆಗಿದ್ದರೆ, ಸಹಕಾರಿ ಬ್ಯಾಂಕುಗಳ ಪಾಲು 55,000 ಕೋಟಿ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಪಾಲು 33,000 ಕೋಟಿ ರೂಪಾಯಿ ಆಗಿತ್ತು.

ಮಧ್ಯವಾರ್ಷಿಕ ಪರಾಮರ್ಷೆಯ ಪ್ರಕಾರ ಎಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯ ತನಕ 95,064 ಕೋಟಿ ರೂಪಾಯಿಗಳಷ್ಟು ಸಾಲವಿತರಣೆಯಾಗಿತ್ತು.

2007-08ರಲ್ಲಿ 2.44 ಲಕ್ಷ ಕೋಟಿ ಕೃಷಿ ಸಾಲ ನೀಡಲಾಗಿದ್ದರೆ, 2005-06ರಲ್ಲಿ ಈ ಮೊತ್ತ 1.80ಲಕ್ಷ ಕೋಟಿ ಆಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೃಷಿ ಸಾಲ, ವಿತ್ತೀಯ ವರ್ಷ, 200809
ಮತ್ತಷ್ಟು
ಬ್ಯಾಂಕಿನಿಂದ ನಗದೀಕರಣ ತೆರಿಗೆ: ಇನ್ನು ತೆರಬೇಕಾಗಿಲ್ಲ
ವಿತ್ತೀಯ ಉತ್ತೇಜನಕ್ಕೆ ಸಿಂಗ್ ಕರೆ
300 ಸತ್ಯಂ ನೌಕರರು ಬ್ಯಾಂಕಾಫ್ ಅಮೆರಿಕಕ್ಕೆ
ವಿಮಾನ ಇಂಧನ ಬೆಲೆ ಮತ್ತಷ್ಟು ದುಬಾರಿ
ಏಪ್ರಿಲ್ 1ರ ವೈರಸ್ ಬಂತೇ? ಆತಂಕ ಬೇಡ!
ಎಚ್‌‌ಎಎಲ್ ಮುಖ್ಯಸ್ಥರಾಗಿ ಕನ್ನಡಿಗ ನಾಯಕ್ ನೇಮಕ