ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2016ರೊಳಗೆ ಮಾರುತಿ 800 ಮಾರಾಟಕ್ಕೆ ತೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2016ರೊಳಗೆ ಮಾರುತಿ 800 ಮಾರಾಟಕ್ಕೆ ತೆರೆ
ಮಾರುತಿ 800ಕಾರುಗಳ ಮಾರಾಟಕ್ಕೆ ಮುಂದಿನ ವರ್ಷದಿಂದ ಮಾರುತಿ ಸುಝಕಿ ಇಂಡಿಯಾ ಇಂಡಿಯಾ (ಎಂಎಸ್‌ಐ) ತೆರೆ ಎಳೆಯಲು ಆರಂಭಿಸಲಿದ್ದು, ಬೆಂಗಳೂರು, ಚೆನ್ನೈ ಸೇರಿದಂತೆ 11ನಗರಗಳಲ್ಲಿ ಇದು ಜಾರಿಗೆ ಬರಲಿದೆ.

ಜನಸಾಮಾನ್ಯರ ನ್ಯಾನೋ ಕಾರು ಶೋರೂಂಗಳಲ್ಲಿ ಕಾಣಿಸಿಕೊಂಡ ನಂತರ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ. ಇದರ ಜೊತೆಗೆ ಮಾರುತಿಯ ಮತ್ತೊಂದು ಹಳೆಯ ಮಾದರಿ ಓಮಿನಿ ಮಾರಾಟ ಕೂಡ ಸ್ಥಗಿತಗೊಳ್ಳಲಿದೆ.

ಯುರೋ-4ಮಾಲಿನ್ಯ ಹೊರಸೂಸುವಿಕೆ ನಿಯಂತ್ರಣ ನಿಯಮಾವಳಿಗಳು ರಾಷ್ಟ್ರದಾದ್ಯಂತ 2015-16ರ ವೇಳೆಗೆ ಅಳವಡಿಕೆಯಾಗಲಿದೆ. ಆಗ ಎಂ800 ಹಾಗೂ ಓಮಿನಿ ಮಾರಾಟ ಸಾಧ್ಯತೆ ಕಷ್ಟ. ಹೀಗಾಗಿ ಕ್ರಮೇಣ ಈ ಮಾದರಿಗಳನ್ನು ನಾವು ತೆಗೆದುಹಾಕುತ್ತಾ ಹೋಗಬೇಕಾಗುತ್ತದೆ ಎಂದು ಎಂಎಸ್‌ಐ ಅಧ್ಯಕ್ಷ ಆರ್.ಸಿ.ಭಾರ್ಗವ್ ಪಿಟಿಐಗೆ ತಿಳಿಸಿದ್ದಾರೆ.

ಯುರೋ-4 ನಿಯಮಾವಳಿಗಳಿಗೆ ಸರಿಸಮಾನವಾದ ಭಾರತ್ ಹಂತ-4 ಮಾಲಿನ್ಯ ನಿಯಂತ್ರಣ ನಿಯಮಾವಳಿಗಳು ಜಾರಿಗೆ ಬರಲಿರುವ 11ನಗರಗಳಲ್ಲಿ, ಆರಂಭದಲ್ಲಿ ಈ ಎರಡೂ ಮಾದರಿಗಳ ವಾಹನಗಳ ಮಾರಾಟವನ್ನು ಮುಂದಿನ ವರ್ಷ ನಿಲ್ಲಿಸಲಾಗುವುದು. ಈ ಪೈಕಿ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ ನಗರಗಳೂ ಸೇರಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನವದೆಹಲಿ, ಸುಝಕಿ, ಚೆನ್ನೈ, ಬೆಂಗಳೂರು,
ಮತ್ತಷ್ಟು
ಬಡ್ಡಿದರ ಇಳಿಕೆ
ಕಾಫಿ ರಫ್ತು ಇಳಿಕೆ
2008-09ರಲ್ಲಿ 2.50 ಲಕ್ಷ ಕೋಟಿ ಕೃಷಿ ಸಾಲ
ಬ್ಯಾಂಕಿನಿಂದ ನಗದೀಕರಣ ತೆರಿಗೆ: ಇನ್ನು ತೆರಬೇಕಾಗಿಲ್ಲ
ವಿತ್ತೀಯ ಉತ್ತೇಜನಕ್ಕೆ ಸಿಂಗ್ ಕರೆ
300 ಸತ್ಯಂ ನೌಕರರು ಬ್ಯಾಂಕಾಫ್ ಅಮೆರಿಕಕ್ಕೆ