ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಹೊಡೆತ-ತಪ್ಪನ್ನು ಪುನರಾವರ್ತಿಸಬೇಡಿ: ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಹೊಡೆತ-ತಪ್ಪನ್ನು ಪುನರಾವರ್ತಿಸಬೇಡಿ: ಸಿಂಗ್
ಜಾಗತಿಕವಾಗಿ ಬಿಕ್ಕಟ್ಟಿಗೆ ಕಾರಣವಾಗಿರುವ ಆರ್ಥಿಕ ಹಿಂಜರಿತದ ಕುರಿತು ಆತಂಕ ವ್ಯಕ್ತಪಡಿಸಿರುವ ಪ್ರಧಾನಿ ಡಾ.ಮನಮೋಹನ ಸಿಂಗ್, ಈ ಹಿಂದಿನ ತಪ್ಪನ್ನು ಮತ್ತೆ ಪುನರಾವರ್ತಿಸಬೇಡಿ ಎಂದು ಕೈಗಾರಿಕಾ ದೇಶಗಳಿಗೆ ಕರೆ ನೀಡಿದರು.

ಲಂಡನ್‌ನಲ್ಲಿ ಆರಂಭಗೊಳ್ಳಲಿರುವ ಜಿ-20ರ ಶೃಂಗಸಮ್ಮೇಳನಕ್ಕೆ ಆಗಮಿಸಿರುವ ಪ್ರಧಾನಿ ಅವರು ಬ್ರಿಟನ್ ಪ್ರಧಾನಿ ಗೋರ್ಡನ್ ಬ್ರೌನ್ ಅವರು ಬುಧವಾರ ರಾತ್ರಿ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಆರ್ಥಿಕ ಹಿಂಜರಿತ ತಡೆಗಟ್ಟುವ ನಿಟ್ಟಿನಲ್ಲಿ ಪ್ರಮುಖವಾಗಿ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ ಎಂದರು.

ಅಭಿವೃದ್ಧಿ ಶೀಲ ದೇಶಗಳಿಗೆ ಆರ್ಥಿಕ ಹೊಡೆತವನ್ನು ತಡೆಗಟ್ಟುವ ರಕ್ಷಣಾತ್ಮಕ ಕ್ರಮದ ಅಗತ್ಯವಿದೆ ಎಂದ ಅವರು, ಈ ಬೆಳವಣಿಗೆ ತುಂಬಾ ಆಶ್ಚರ್ಯ ಪಡುವಂಥಾದ್ದಲ್ಲ, ಆರ್ಥಿಕ ವಹಿವಾಟನ್ನು ಕುಂಠಿತಗೊಳಿಸುವ ಪ್ರಕ್ರಿಯೆ ಇದಾಗಿದ್ದು, ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುತ್ತದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಿಜಕ್ಕೂ ಇದೊಂದು ನಮಗೆ ಸವಾಲಿನ ಪ್ರಶ್ನೆಯಾಗಿದೆ. ಆ ನಿಟ್ಟಿನಲ್ಲಿ ಮತ್ತೆ ಇಂತಹ ತಪ್ಪುಗಳು ಆಗದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಹೇಳಿದರು. ಈ ಬಗ್ಗೆ ಶೃಂಗಸಭೆಯಲ್ಲಿ ವಿಸ್ತ್ರತವಾದ ಚರ್ಚೆ ನಡೆಸುವ ಮೂಲಕ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣದುಬ್ಬರ ಶೇ.0.31ಕ್ಕೆ ಚೇತರಿಕೆ
2016ರೊಳಗೆ ಮಾರುತಿ 800 ಮಾರಾಟಕ್ಕೆ ತೆರೆ
ಬಡ್ಡಿದರ ಇಳಿಕೆ
ಕಾಫಿ ರಫ್ತು ಇಳಿಕೆ
2008-09ರಲ್ಲಿ 2.50 ಲಕ್ಷ ಕೋಟಿ ಕೃಷಿ ಸಾಲ
ಬ್ಯಾಂಕಿನಿಂದ ನಗದೀಕರಣ ತೆರಿಗೆ: ಇನ್ನು ತೆರಬೇಕಾಗಿಲ್ಲ