ಕೋಕಾಕೋಲಾ ತಂಪುಪಾನೀಯದ ಜಾಹೀರಾತಿನಲ್ಲಿರುವ ಸಂಪೂರ್ಣ ಅಸ್ವೀಕಾರ ಅಂಶವನ್ನು ತೊಡೆದು ಹಾಕಿ ತಿದ್ದುಪಡಿಗಳನ್ನು ಪ್ರಕಟಿಸಬೇಕು ಎಂಬುದಾಗಿ ಆಸ್ಟ್ರೇಲಿಯಾದ ಗ್ರಾಹಕರ ನಿಯಂತ್ರಣ ಮಂಡಳಿ ಆದೇಶ ನೀಡಿದೆ. ಈ ಲಘು ಪಾನೀಯದಿಂದ ಆರೋಗ್ಯಕ್ಕೆ ಅಪಾಯವೆಂಬುದೊಂದು ಮಿಥ್ಯಕಲ್ಪನೆ ಎಂದು ಜಾಹೀರಾತಿನಲ್ಲಿ ಹೇಳಿರುವುದನ್ನು ತೊಡೆದು ಹಾಕಬೇಕು ಎಂದು ಆದೇಶಿಸಲಾಗಿದೆ.
ತಾಯಂದಿರನ್ನು ಗುರಿಯಾಗಿಸಿ ಕಳೆದ ಅಕ್ಟೋಬರ್‌ನಲ್ಲಿ ರಾಷ್ಟ್ರಾದ್ಯಂತ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದ್ದ ಜಾಹೀರಾತಿನಲ್ಲಿ, ಕೋಕ್ ನಿಮ್ಮಲ್ಲಿ ಬೊಜ್ಜು ಬೆಳೆಯುವಂತೆ ಮಾಡುತ್ತದೆ, ನಿಮ್ಮ ಹಲ್ಲನ್ನು ಕೆಡಿಸುತ್ತದೆ ಅಥಾ ಅದರಲ್ಲಿ ಕೆಫೆನ್ ಇದೆ ಎಂಬುದೆಲ್ಲ ಸತ್ಯಕ್ಕೆ ದೂರ ಎಂದು ಹೇಳಿತ್ತು ಎಂಬುದಾಗಿ ಗ್ರಾಹಕರ ಆಯೋಗವು ತಿಳಿಸಿದೆ.
ಕೋಕ್ ನೀಡುವ ಈ ಸಂದೇಶಗಳು ಸಂಪೂರ್ಣವಾಗಿ ಸ್ವೀಕಾರರಾರ್ಹವಲ್ಲ, ಕೋಕಾಕೋಲ ಬೊಜ್ಜು ಹೆಚ್ಚಿಸುವುದಿಲ್ಲ, ಹಲ್ಲು ಸವೆಯಿಸುವುದಿಲ್ಲ ಎಂಬುದು ಜನರನ್ನು ತಪ್ಪುದಾರಿಗೆಳೆಯುವ ಸಂದೇಶ ಎಂದು ಆಯೋಗ ಹೇಳಿದೆ. |