ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳನ್ನು ಸಮತೋಲನಗೊಳಿಸುವಂತಹ ನೀತಿಗಳನ್ನು ಜಾರಿಗೆ ತರದೇ ಇದ್ದರೆ ಈ ವರ್ಷ ನಿರುದ್ಯೋಗವು ಐದು ಕೋಟಿಗಳಷ್ಟು ಹೆಚ್ಚಲಿದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಓ) ಭವಿಷ್ಯ ನುಡಿದಿದೆ.
ಇದಲ್ಲದೆ ಜಾಗತಿಕ ಆರ್ಥಿಕ ಕುಸಿತವು ಸಾಂದರ್ಭಿಕ ಕೆಲಸಗಾರರನ್ನು ಖಾಯಂ ಕೆಲಸಗಾರರಿಗಿಂತ ನಾಲ್ಕು ಪಟ್ಟು ಹೆಚ್ಚು ಸಮಸ್ಯೆಗೀಡು ಮಾಡಿದೆ ಎಂದು ಅದು ಹೇಳಿದೆ.
ವಿಶ್ವವು ಒಟ್ಟಾಗಿ ಕಾರ್ಯಕೈಗೊಂಡು ಸಾಮಾಜಿಕ ಮತ್ತು ಆರ್ಥಿಕ ಸಂತುಲನಗೊಳ್ಳುವಂತ ನೀತಿಗಳನ್ನು ಜಾರಿಗೆ ತಂದರೆ ಈ ಪೃವೃತ್ತಿಯಲ್ಲಿ ಬದಲಾವಣೆ ಉಂಟಾಗಬಹುದು ಎಂದು ಅದು ತಿಳಿಸಿದೆ.
ಉದ್ಯೋಗ ಸೃಷ್ಟಿ, ಉದ್ಯಮಗಳಿಗೆ ಸಾಲ ಹರಿವು, ಹೆಚ್ಚಿನ ಸಾಮಾಜಿಕ ರಕ್ಷಣೆ ಹಾಗೂ ಕೆಲಸಗಾರರ ಹಕ್ಕು ಹಾಗೂ ಗೌರವಗಳ ಖಚಿತತೆಯಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂಬುದಾಗಿ ಭಾರತದಲ್ಲಿ ಐಎಲ್ಓ ಪ್ರತಿನಿಧಿ ಲೈಲಾ ಟೋಗ್ಮೋ ರೆಡ್ಡೀಸ್ ಹೇಳಿದ್ದಾರೆ. |