ವಿಶ್ವವು ಅತ್ಯಂತ ಕೆಟ್ಟ ಆರ್ಥಿಕ ಹಿಂಸರಿತ ಸಮಸ್ಯೆ ಎದುರಿಸುತ್ತಿರುವ ಕಾರಣ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯು ಅಭಿವೃದ್ದಿ ಪರ ರಾಷ್ಟ್ರಗಳಿಗೆ ಸಹಾಯ ಮಾಡಲು 500 ಶತಕೋಟಿ ಡಾಲರ್‌ಗಳನ್ನು ನೀಡಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಕರೆ ನೀಡಿದ್ದಾರೆ. ಅಲ್ಲದೆ, ಅವರು ರಕ್ಷಣಾತ್ಮಕತೆಯ ವಿರುದ್ಧ ಶ್ರೀಮಂತ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದರು.
ಔದ್ಯಮೀಕೃತ ಜಗತ್ತಿನಲ್ಲಿ ರಕ್ಷಣಾತ್ಮಕ ಭಾವನೆಯ ಹೆಚ್ಚಳವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕಳವಳಕಾರಿ ವಿಚಾರವಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು. ಅವರು ಬ್ರಿಟಿಷ್ ಪ್ರಧಾನಿ ಗೋರ್ಡನ್ ಬ್ರೌನ್ ಅವರು ಜಿ-20 ನಾಯಕರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಮಾತನಾಡುತ್ತಿದ್ದರು.
"ಈ ಪೃತ್ತಿಯು ಆಶ್ಚರ್ಯಕರವಲ್ಲ. ಆರ್ಥಿಕ ಹಿಂಸರಿತವು ನಿರುದ್ಯೋಗವನ್ನು ಹೆಚ್ಚಿಸುತ್ತದೆ. ಇದು ನಾವು ಹಿಂದಿನ ತಪ್ಪುಗಳನ್ನು ಮರುಕಳಿಸಬಾರದು ಎಂಬುದಾಗಿ ಸಾರ್ವಜನಿಕರ ಮನಒಲಿಸಬೇಕೇ ಎಂಬುದು ನಾಯಕತ್ವಕ್ಕೆ ಪರೀಕ್ಷೆ ಎಂದು ಅವರು ಹೇಳಿದರು.
ಈ ಪರಿಸ್ಥಿತಿಯು ದೀರ್ಘವಾದಷ್ಟೂ ಸಮಸ್ಯೆ ಹೆಚ್ಚುತ್ತದೆ ಎಂದು ಅವರು ನುಡಿದರು. |