ಅಸ್ವಾಭಾವಿಕವಾದ ಜಿಡಿಪಿ ಏರಿಕೆ ಮತ್ತು ಆರ್ಥಿಕ ಉತ್ತೇಜನ ಹಣಕಾಸು ವ್ಯವಸ್ಥೆಗೆ ಉತ್ತಮವಾದ ಬೆಳವಣಿಗೆಯಲ್ಲ ಎಂದು ಇಂಡಸ್ಟ್ರಿ ಮಂಡಳಿ ಸಿಐಐ ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿದೆ.
ಹೆಚ್ಚಿನ ಆರ್ಥಿಕ ನೆರವಿನ ಉತ್ತೇಜನದ ಪ್ಯಾಕೇಜ್ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಲಿದೆ. ನಾವು ಯಾವುದೇ ಹಣಕಾಸಿನ ನೆರವಿನ ಪ್ಯಾಕೇಜ್ ಕೇಳುತ್ತಿಲ್ಲ ಎಂದು ಇಂಡಿಯನ್ ಇಂಡಸ್ಟ್ರಿಯ ಅಧ್ಯಕ್ಷ ವೇಣು ಶ್ರೀನಿವಾಸನ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಜಾಗತಿಕ ಆರ್ಥಿಕ ಹಿಂಜರಿಕೆಯಿಂದ ಹೆಚ್ಚಿನ ಅಭಿವೃದ್ಧಿಶೀಲ ದೇಶಗಳು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದು, ಆ ನಿಟ್ಟಿನಲ್ಲಿ ಭಾರತ ಕೂಡ ಆರ್ಥಿಕವಾಗಿ ದೃಢವಾಗಿದ್ದರೂ ಕೂಡ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದರು.
ಆ ಕಾರಣಕ್ಕಾಗಿ ಅನಾವಶ್ಯಕವಾಗಿ ಆರ್ಥಿಕ ಉತ್ತೇಜನಕ್ಕೆ ಹೆಚ್ಚಿನ ಪ್ಯಾಕೇಜ್ ಘೋಷಿಸುತ್ತಾ ಹೋದರೆ, ಇದು ಸರ್ಕಾರದ ಆರ್ಥಿಕ ನೀತಿಗೆ ಹೆಚ್ಚಿನ ಒತ್ತಡ ಬೀಳಲಿದೆ. ಅಲ್ಲದೇ ರಿಸರ್ವ್ ಬ್ಯಾಂಕ್ ಕೂಡ ಬಡ್ಡಿದರ ಕಡಿತದ ಸೂಚನೆ ನೀಡಿರುವುದಾಗಿ ಹೇಳಿದರು. |