ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬಲಪಡಿಸುವ ನಿಟ್ಟಿನಲ್ಲಿ 500 ಶತಕೋಟಿ ಡಾಲರ್ ಕ್ರೋಡಿಕರಿಸಲು ಜಿ-20ಶೃಂಗಸಭೆಯಲ್ಲಿ ನಾಯಕರು ಅಂಗೀಕಾರ ನೀಡುವ ಸಾಧ್ಯತೆ ಇದೆ.
ಅಲ್ಲದೇ ಆರ್ಥಿಕ ಹಿಂಜರಿಕೆ ಎದುರಿಸಲು ವಿಶ್ವದ ಪ್ರಭಾವಿ ನಾಯಕರು ಸಮಗ್ರ ಯೋಜನೆ ರೂಪಿಸಬೇಕಾದ ಅಗತ್ಯ ಇದೆ ಎಂದು ಈಗಾಗಲೇ ಒತ್ತಿ ಹೇಳಿದ್ದರು. ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ, ಅಧಿಕಾರಿಗಳು, ಮುಖ್ಯಸ್ಥರು ಪಡೆಯುತ್ತಿರುವ ಭಾರಿ ವೇತನಕ್ಕೆ ಕತ್ತರಿ ಹಾಗೂ ಕೆಲ ಯೋಜನೆಗೆ ನೀಡುವ ತೆರಿಗೆ ವಿನಾಯಿತಿ ಕಡಿತ ಮಾಡುವಂತೆ ಸಭೆ ಶಿಫಾರಸು ಮಾಡಲಿದೆ.
ಅಂತಾರಾಷ್ಟ್ರೀಯ ವಾಣಿಜ್ಯ ವಹಿವಾಟಿಗೆ ಉತ್ತೇಜನ ನೀಡಲು ಅಂದಾಜು 100 ಶತಕೋಟಿ ಡಾಲರ್ ಹಣಕಾಸು ಒದಗಿಸುವ ಸಂಭವ ಇದೆ. ಮುಕ್ತ ವ್ಯಾಪಾರ ನಿಯಮಾವಳಿಗಳನ್ನು ಉಲ್ಲಂಘಿಸಿರುವ ದೇಶಗಳ ಹೆಸರನ್ನೂ ಶೃಂಗಸಭೆಯಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ. |