ಭಾರತವು ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ತನ್ನ ಕೊಡುಗೆಯನ್ನು ಹೆಚ್ಚಿಸಲಿದೆ, ಅದರೆ ಆದರೆ ಅಲ್ಲಿಂದ ಹಣಪಡೆಯುವ ಇಚ್ಚೆಯನ್ನು ಹೊಂದಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವ ಸಮುದಾಯಕ್ಕೆ ತಿಳಿಸಿದ್ದಾರೆ.
"ಸದ್ಯಕ್ಕೆ ನಮಗೆ ಐಎಂಎಫ್‌ಗೆ ತೆರಳುವ ಅವಶ್ಯಕತೆ ಕಾಣುತ್ತಿಲ್ಲ. ನಮ್ಮ ಕೋಟಾದ ಅನುಪಾತ ಪ್ರಕಾರ ಕೊಡುಗೆ ನೀಡುವುದನ್ನು ಪರಿಗಣಿಸಬಹುದು" ಎಂದು ಅವರು ಜಿ-20 ನಾಯಕರ ಸಭೆಯ ಬಳಿಕ ನುಡಿದರು.
ಭಾರತಕ್ಕೆ ಸಂಬಂಧಿಸಿದಂತೆ ನಾವು ಐಎಂಎಫ್‌ಗೆ ಕೊಡುಗೆ ನೀಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಸಿಂಗ್ ಅವರು ನುಡಿದರು. ಜಿ-20 ಶೃಂಗ ಸಮ್ಮೇಳನವು ಅಂಗೀಕರಿಸಿರುವ ಸೌಲಭ್ಯದ ಪ್ರಕಾರ ಮೆಕ್ಸಿಕೊದಂತೆ ಭಾರತವು ನಿಧಿಯನ್ನು ಹಿಂತೆಗೆದುಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್ ಮೇಲಿನಂತೆ ಉತ್ತರಿಸಿದ್ದಾರೆ.
ಭಾರತವು 250 ಶತಕೋಟಿ ಡಾಲರ್ ವಿದೇಶಿ ವಿನಿಮಯ ಮೀಸಲನ್ನು ಹೊಂದಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.
ಹಣಕಾಸು ಸ್ಥಿರತೆ ವೇದಿಕೆ ಹಾಗೂ ಬ್ಯಾಂಕಿಂಗ್ ಮೇಲ್ವಿಚಾರಣೆಯ ಬಾಸ್ಲೆ ಸಮಿತಿಯ ಸದಸ್ಯತ್ವ ಭಾರತಕ್ಕೆ ಲಭಿಸಿರುವುದಕ್ಕೆ ತೃಪ್ತಿ ವ್ಯಕ್ತ ಪಡಿಸಿದ ಸಿಂಗ್, ಭಾರತವನ್ನು ಒಂದು ಬೃಹತ್ ಆರ್ಥಿಕತೆ ಎಂದು ಗುರುತಿಸಲಾಗಿದೆ ಮತ್ತು ಇದೊಂದು ಬಹುದೊಡ್ಡ ಸಾಧನೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. |