ಜಾಗತಿಕ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಆರ್ಥಿಕತೆಗಳಿಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಸಾವಿರ ಕೋಟಿ ಡಾಲರ್ ಸಹಾಯ ಒದಗಿಸುವ ಮಹತ್ವದ ನಿರ್ಧಾರವನ್ನು ಜಿ-20 ರಾಷ್ಟ್ರಗಳು ಗುರುವಾರ ಕೈಗೊಂಡಿವೆ.
ಐಎಂಎಫ್ ಸಂಪನ್ಮೂಲವನ್ನು ತ್ರಿಗುಣಗೊಳಿಸಲು 570 ಶತಕೋಟಿ ಡಾಲರ್, ಹಣ ವಾಪಾಸು ಪಡೆಯುವ ಮೂಲಕ ನೂತನ ವಿಶೇಷ ಹಕ್ಕುಗಳನ್ನು ಬೆಂಬಲಿಸಲು 250 ಶತಕೋಟಿ ಡಾಲರ್, ಬಹುರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕುಗಳಿಂದ ಹೆಚ್ಚುವರಿ ಸಾಲ ನೀಡಿಕೆಗೆ 100 ಶತಕೋಟಿ ಡಾಲರ್, ವಾಣಿಜ್ಯ ಹಣಕಾಸು ಬೆಂಬಲ ಖಾತ್ರಿ ಹಾಗೂ ಬಡರಾಷ್ಟ್ರಗಳಿಗೆ ರಿಯಾಯಿತಿ ನೆರವು ನೀಡಲು 250 ಶತಕೋಟಿ ಡಾಲರ್ ಒದಗಿಸುವ ಒಪ್ಪಂದಕ್ಕೆ ಜಿ-20 ನಾಯಕರ ಸಹಿ ಹಾಕಿದರು.
ಈ ವರ್ಷಾಂತ್ಯದಲ್ಲಿ ನಾಯಕರು ಮತ್ತೆ ಸಭೆ ಸೇರಲಿದ್ದು, ಸಭೆಯ ಸ್ಥಳವನ್ನು ಮುಂದೆ ನಿರ್ಧರಿಸಲಾಗುವುದು. |