ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಈಕ್ವಿಟಿ ಕುಸಿದ ಕಂಡ ಪರಿಣಾಮ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆಯಲ್ಲಿ 350ರೂ.ಕಡಿಮೆಯಾಗುವ ಮೂಲಕ 10ಗ್ರಾಂ ಚಿನ್ನಕ್ಕೆ 14,900ರೂ.ಬೆಲೆಗೆ ಇಳಿದಿದೆ.ಒಂದೇ ಸಮನೆ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿನ ಇಳಿಕೆ ಜನರಲ್ಲಿ ನಿಟ್ಟುಸಿರು ಬಿಡುವಂತಾಗಿದ್ದು, ಅದೇ ರೀತಿಯಲ್ಲಿ ಬೆಳ್ಳಿ ಬೆಲೆಯಲ್ಲಿಯೂ 500ರೂ. ಕಡಿಮೆಯಾಗಿದ್ದು, ಕೆಜಿಗೆ 21,300ರೂ.ಆಗಿದೆ.ಚಿನ್ನದ ಬೆಲೆ ಏರಿಕೆ ಮತ್ತು ಮಾರಾಟ ಕುರಿತಂತೆ ಲಂಡನ್‌ನಲ್ಲಿ ಗುರುವಾರ ಆರಂಭಗೊಂಡಿರುವ ಜಿ-20ಶೃಂಗಸಭೆಯಲ್ಲಿ ವಿಶ್ವ ನಾಯಕರು ಚರ್ಚೆ ನಡೆಸಿದ್ದರು. ಈ ರೀತಿಯಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದರೆ ಬಂಗಾರದ ವಹಿವಾಟಿನಲ್ಲಿ ಸಾಕಷ್ಟು ಪರಿಣಾಮ ಬೀಳಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಜಾಗತಿಕ ಆರ್ಥಿಕ ಹಿಂಜರಿಕೆಯಿಂದ ಆತಂಕ ಪಟ್ಟ ಶೇರು ಮಾರುಕಟ್ಟೆಯ ಗ್ರಾಹಕರು ಶೇರುಮಾರುಕಟ್ಟೆಯಲ್ಲಿ ಹೂಡಿದ್ದ ಹಣವನ್ನು ಬೇರೆಡೆಗೆ ಹೂಡಿಕೆ ಮಾಡಿರುವುದೇ ಮಾರುಕಟ್ಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿರುವುದಾಗಿ ಹೇಳಿದರು. |