ಮ್ಯೂಚುವಲ್ ಫಂಡ್ ರಂಗದಲ್ಲಿ ಕಳೆದ 2008-09ರ ಸಾಲಿನಲ್ಲಿ ಅಂದಾಜು 37ಸಾವಿರ ಕೋಟಿ ಸಂಪತ್ತು ನಷ್ಟ ಅನುಭವಿಸಿದೆ. ರಿಲಯನ್ಸ್ ಮ್ಯೂಚುವಲ್ ಫಂಡ್ ಅತಿ ಹೆಚ್ಚು ನಷ್ಟ ಅನುಭವಿಸಿರುವ ಕಂಪನಿ ಎನಿಸಿಕೊಂಡಿದೆ.
ಸುರಕ್ಷಿತ ಹೂಡಿಕೆ ಮಾರ್ಗ ಎಂದು ಪರಿಗಣಿಸಲಾಗುತ್ತಿದ್ದ ಮ್ಯೂಚುವಲ್ ಫಂಡ್ ವಲಯ ಕಳೆದ 2008-09ರ ಸಾಲಿನಲ್ಲಿ ಸುಮಾರು 37ಸಾವಿರ ಕೋಟಿ ರೂಪಾಯಿ ಸಂಪತ್ತು ನಷ್ಟು ಅನುಭವಿಸಿದೆ. ರಿಲಯನ್ಸ್ ಮ್ಯೂಚುವಲ್ ಫಂಡ್ ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪೆನಿಯಾಗಿದೆ.
ದೇಶದ 35ಮ್ಯೂಚುವಲ್ ಫಂಡ್ ಕಂಪೆನಿಗಳ ಒಟ್ಟು ಸರಾಸರಿ ತೆಗೆದರೆ ರೂ. 36,789.58ಕೋಟಿ(ಶೇ.6.94ರಷ್ಟು) ಸಂಪತ್ತು ಕರಗಿದೆ. ಮಾರ್ಚ್ ಅಂತ್ಯದ ವೇಳೆಗೆ ವಲಯ ಸಂಪತ್ತು 4,93,286.56 ಕೋಟಿ ರೂಪಾಯಿಗೆ ಇಳಿದಿದೆ. |