ಜಾಗತಿಕ ಆರ್ಥಿಕ ಹಿಂಜರಿತದ ಹೊಡೆತದ ಪರಿಣಾಮದಿಂದಾಗಿ ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಮಾರ್ಚ್ 31ರ ಅಂಕಿ-ಅಂಶಗಳ ಪ್ರಕಾರ ಜಪಾನ್‌ನ ಪ್ರತಿಷ್ಠಿತ ಮೂರು ಬ್ಯಾಂಕ್‌ಗಳು ನಷ್ಟದ ಭೀತಿಯನ್ನು ಹೊಂದಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.
ಮಿತ್ಸುಬಿಷಿ ಯುಎಫ್‌ಜೆ ಫೈನಾಶ್ಶಿಯಲ್ ಗ್ರೂಪ್, ಮಿಜುಹೋ ಫೈನಾಶ್ಶಿಯಲ್ ಗ್ರೂಪ್ ಹಾಗೂ ಸುಮಿಟೋಮೋ ಮಿತ್ಸುಯಿ ಫೈನಾಶ್ಶಿಯಲ್ ಗ್ರೂಪ್ ಸೇರಿದಂತೆ ಪ್ರತಿಷ್ಠಿತ ಮೂರು ಬ್ಯಾಂಕ್‌ಗಳು ಪ್ರಥಮ ಬಾರಿಗೆ ನಷ್ಟದ ಬಿಸಿ ಅನುಭವಿಸುವಂತಾಗಿದೆ ಎಂದು ಆಸಾಚಿ ಶಿಂಬುನ್ ಹಾಗೂ ನಿಕ್ಕೈ ಬ್ಯುಸಿನೆಸ್ ಡೈಲಿ ಪತ್ರಿಕಾ ವರದಿಗಳು ತಿಳಿಸಿವೆ.
ಮೂರು ಬ್ಯಾಂಕ್‌ಗಳು ಈ ಮೊದಲಿನ ಲೆಕ್ಕಾಚಾರದಂತೆ ಲಾಭಾಂಶದಲ್ಲೇ ಇದ್ದು, ವರ್ಷದ ಏಪ್ರಿಲ್ ತಿಂಗಳಲ್ಲಿ ಲಾಭಾಂಶದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆ ಹೊಂದಿರುವುದಾಗಿ ಆತಂಕ ವ್ಯಕ್ತಪಡಿಸಿವೆ.
ಬ್ಯಾಂಕಿನ ನಷ್ಟದ ಬಗ್ಗೆ ಮೆರ್ರೈಲ್ ಲಿಂಚ್ ಮತ್ತು ಬಾರ್‌ಕ್ಲೇಸ್‌ಗೆ ಪತ್ರ ಮುಖೇನ ವಿವರಿಸಲಾಗಿದೆ ಎಂದು ಮಿಚುಹೋ ಮತ್ತು ಸುಮಿಟೋಮೋ ಬ್ಯಾಂಕ್ ಅಧಿಕಾರಿಗಳು ವಿವರಿಸಿದ್ದಾರೆ. |