ವಿಶ್ವವನ್ನು ಕಾಡುತ್ತಿರುವ ಆರ್ಥಿಕ ಹಿಂಸರಿತವು ಮಾರುಕಟ್ಟೆ ಚಿತ್ರಣವನ್ನು ಬದಲಿಸುತ್ತಿದ್ದು, ಇದು ಭಾರತದ ಚಿನ್ನದ ಮಾರುಕಟ್ಟೆಯ ವಹಿವಾಟನ್ನು ಅದಲು ಬದಲು ಮಾಡಿದೆ.ವಿಶ್ವದಲ್ಲೇ ಅತ್ಯಂತ ಗರಿಷ್ಠ ಚಿನ್ನ ಆಮದು ಮಾಡುತ್ತಿದ್ದ ಭಾರತವೀಗ ದುಬೈಗೆ ಚಿನ್ನ ರಫ್ತುಮಾಡುವ ದೇಶವಾಗಿದೆ.ಚಿನ್ನದ ದರವು ಫೆ.20ರಂದು ದೇಶಿಯ ಮಾರುಕಟ್ಟೆಯಲ್ಲಿ ಗರಿಷ್ಠ ದರವನ್ನು ತಲುಪಿತ್ತು. ಅಂದು ಚಿನ್ನದ ದರವು 10 ಗ್ರಾಂಗೆ 16,040 ರೂಪಾಯಿಯ ಸಾರ್ವಕಾಲಿಕ ದಾಖಲೆ ಬರೆದಿತ್ತು. ಇದರಿಂದ ಭಾರತದ ಮಾರುಕಟ್ಟೆಯಲ್ಲಿ ಚಿನ್ನ ಖರೀದಿಯಲ್ಲಿ ಹಿಂದೇಟು ಹಾಕಿದ್ದ ಪರಿಣಾಮ ಚಿನ್ನದ ವ್ಯಾಪಾರಿಗಳು ಚಿನ್ನವನ್ನು ಹೊರದೇಶಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಸ್ವರ್ಣಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.ಕಳೆದ ಡಿಸೆಂಬರ್ 22ರಂದು ಚಿನ್ನದ ದರ 10ಗ್ರಾಂಗೆ 13000 ವಿತ್ತು. ಇದು ಫೆ.17ರಂದು 15,420ಗಳಿಗೇರಿತ್ತು. ಫೆ.20ರಂದು ಈ ಹಳದಿ ಲೋಹದ ಬೆಲೆ 10 ಗ್ರಾಂಗೆ 16,040 ರೂ ಆಗಿತ್ತು. ಈ ಅವಧಿಯಲ್ಲಿ ಭಾರತದಿಂದ ಒಟ್ಟು ಆರು ಟನ್ ಚಿನ್ನ ರಫ್ತು ಮಾಡಲಾಗಿದ್ದು, ರಫ್ತುವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. |