ಮೂಲಭೂತ ಯೋಜನೆಗಳು ಹಾಗೂ ಆರ್ಥಿಕ ಸಂಸ್ಥೆಗಳ ಸಬಲೀಕರಣಕ್ಕಾಗಿ ವಿಶ್ವಬ್ಯಾಂಕ್‌ನಿಂದ 5.2ಬಿಲಿಯನ್ ಡಾಲರ್‌ನಷ್ಟು ನೆರವಿನ ನಿರೀಕ್ಷೆಯಲ್ಲಿರುವುದಾಗಿ ಭಾರತ ತಿಳಿಸಿದೆ.
ವಿಶ್ವಬ್ಯಾಂಕಿನ ಈ ನೆರವು ಮುಖ್ಯವಾಗಿ ರಾಜ್ಯದ ಪ್ರಮುಖ ವಾಣಿಜ್ಯ ಬ್ಯಾಂಕ್‌ಗಳನ್ನು ಮುಂದಿನ 2-3ವರ್ಷಗಳಲ್ಲಿ ಆರ್ಥಿಕವಾಗಿ ಸದೃಢಗೊಳಿಸುವುದಾಗಿದೆ ಎಂದು ಭಾರತದ ಅಧಿಕಾರಿಗಳು ವಿವರಿಸಿದ್ದಾರೆ. ಉಳಿದ ಹಣ ಫೈನಾನ್ಸ್ ಕಂಪೆನಿಗಳ ಹಾಗೂ ವಿದ್ಯುತ್ ಘಟಕ ಕಾರ್ಪೋರೇಷನ್ ಅಭಿವೃದ್ದಿಗಾಗಿ ಬಳಕೆ ಮಾಡುವುದಾಗಿ ಹೇಳಿದರು.
ಭಾರತ ಪ್ರತಿವರ್ಷ ವಿಶ್ವಬ್ಯಾಂಕ್‌ನಿಂದ 3ಬಿಲಿಯನ್ ಡಾಲರ್‌ನಷ್ಟು ಆರ್ಥಿಕ ನೆರವನ್ನು ಪಡೆಯುತ್ತಿದೆ. ಆದರೂ ಜಾಗತಿಕ ಆರ್ಥಿಕ ಹಿಂಜರಿತ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ನೆರವು ವಿಶ್ವಬ್ಯಾಂಕ್‌ನಿಂದ ಬೇಕಾಗಿದೆ ಎಂದು ತಿಳಿಸಿದರು.
ಗುರುವಾರ ಲಂಡನ್‌ನಲ್ಲಿ ಆರಂಭಗೊಂಡಿರುವ ಜಿ-20 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. |