ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮಾರ್ಚ್‌ನಲ್ಲಿ ಭಾರತದ ರಫ್ತು ಉದ್ಯಮವು ಶೇ14ರಿಂದ 20ರಷ್ಟು ಕುಸಿತ ಕಂಡಿದೆ ಎಂದು ಅಂದಾಜಿಸಲಾಗಿದೆ. ವಿಶ್ವದ ಬೃಹತ್ ಆರ್ಥಿಕತೆಗಳು ಹಿಂಸರಿತದ ಬಾಧೆ ಎದುರಿಸುತ್ತಿರುವ ಕಾರಣ ಬೇಡಿಕೆ ಕುಸಿದಿದೆ.
ಮಾರ್ಚ್ ತಿಂಗಳಲ್ಲಿ ರಫ್ತು ಸುಮಾರು 12ರಿಂದ 14 ಶತಕೋಟಿ ಡಾಲರ್ ಆಗಿರಬಹುದು ಎಂದು ನಿರೀಕ್ಷಿಸಿರುವುದಾಗಿ ವಾಣಿಜ್ಯ ಕಾರ್ಯದರ್ಶಿ ಜಿ.ಕೆ. ಪಿಳ್ಲೈ ಹೇಳಿದ್ದಾರೆ. ಅಲ್ಲದೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಒಟ್ಟು ರಫ್ತು 168ರಿಂದ 170 ಶತಕೋಟಿ ಡಾಲರ್ ಆಗಿರಬಹುದು ಎಂಬುದಾಗಿ ಅವರು ತಿಳಿಸಿದ್ದಾರೆ.
ರಫ್ತು ಉದ್ಯಮವು ಸತತ ಆರು ತಿಂಗಳಿಂದ ಇಳಿಕೆ ದಾಖಲಿಸಿದೆ. |