ತನ್ನ ಹಣಕಾಸು ವಲಯ ಹಾಗೂ ಮೂಲ ಸೌಕರ್ಯ ಯೋಜನೆಗಳಿಗಾಗಿ ಭಾರತವು ವಿಶ್ವಬ್ಯಾಂಕಿನಿಂದ ಹೆಚ್ಚುವರಿ 5.2ಶತಕೋಟಿ ಡಾಲರ್ ಸಹಾಯ ಯಾಚಿಸಲಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ಎರಡರಿಂದ ಮೂರು ವರ್ಷಗಳ ಕಾಲ ಸರ್ಕಾರಿ ಸ್ವಾಮ್ಯದ ವಾಣಿಜ್ಯ ಬ್ಯಾಂಕುಗಳಿಗೆ ಮರು ಬಂಡವಾಳ ಹೂಡುವಿಕೆಯು ಈ ಸಹಾಯದ ಪ್ರಮುಖ ಭಾಗವಾಗಲಿದೆ ಎಂದು ಇಲ್ಲಿನ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದ ಮೊತ್ತವನ್ನು ಮೂಲ ಸೌಕರ್ಯಗಳಿಗೆ ಹಣಕಾಸು ಒದಗಿಸುವ ಕಂಪೆನಿಗಳು ಮತ್ತು ಇಂಧನ ನಿಗಮಗಳಿಗೆ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ. |