ಕಡಿಮೆ ಪ್ರಯಾಣ ದರದ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿ ಜಿ.ಪಿ.ಗುಪ್ತಾ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದೆ.
ಈ ಮೊದಲು ವಿಮಾನಯಾನ ಸಂಸ್ಥೆಯಲ್ಲಿ ಜಿ.ಪಿ.ಗುಪ್ತಾ ಅವರು ಮುಖ್ಯ ಆರ್ಥಿಕ ಅಧಿಕಾರಿಯಾಗಿ ಕಾರ್ಯನಿರ್ವಹಸಿದ್ದರು. ಇದೀಗ ಸ್ಪೈಸ್ ಜೆಟ್ ಏರ್‌ವೇಸ್‌ನ ಆಡಳಿತಾಧಿಕಾರಿಯಾಗಿ ನೇಮಕವಾಗುವ ಮೂಲಕ ಹೊಸ ಹುದ್ದೆಯನ್ನು ಅಲಂಕರಿಸಿದ್ದಾರೆ. ಗುಪ್ತಾ ಅವರು ಸ್ಪೈಸ್ ಜೆಟ್‌ನ ಎಲ್ಲಾ ವಿಭಾಗದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್ಥಿಕ ವಿಭಾಗ ಸೇರಿದಂತೆ ಗುಪ್ತಾ ಅವರು 21ವರ್ಷಗಳ ದೀರ್ಘಕಾಲದ ಅನುಭವ ಹೊಂದಿದ್ದು, ಆರ್ಥಿಕ, ಮಾನವ ಸಂಪನ್ಮೂಲ ಮತ್ತು ಕಾನೂನು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅಲ್ಲದೇ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ.
|