ಅಂತಾರಾಷ್ಟ್ರೀಯ ಮೊಬೈಲ್ ಉಪಕರಣ ಗುರುತು (ಐಎಂಇಎ) ಎನಿಸಿದ ವಿಶಿಷ್ಟ 15ಅಂಕಿಗಳ ಕೋಡ್ ಇಲ್ಲದಂತಹ ಅಗ್ಗದ ಚೀನಿ ಹ್ಯಾಂಡ್ ಸೆಟ್‌ಗಳನ್ನು ಏಪ್ರಿಲ್ 13ರೊಳಗೆ ಭಾರತೀಯ ಮಾರುಕಟ್ಟೆಯಿಂದ ತೆಗೆದು ಹಾಕಲಾಗುವುದು.
ಐಎಂಇಐ ಇಲ್ಲದ ಫೋನ್‌ಗಳು ಭದ್ರತೆಗೆ ಬೆದರಿಕೆ ಒಡ್ಡುವುದರಿಂದ ಅಂತಹ ಹ್ಯಾಂಡ್‌ಸೆಟ್‌ಗಳನ್ನು ಸೇವೆಯಿಂದ ತೆಗೆದುಹಾಕಬೇಕು ಎಂದು ಟೆಲಿಕಾಂ ಇಲಾಖೆ ಟೆಲಿಫೋನ್ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ ಎಂದು ಟೆಲಿಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಿರ್ದೇಶನದ ನಂತರ ಅಕ್ರಮ ಹ್ಯಾಂಡ್‌ಸೆಟ್‌ಗಳ ಬಳಕೆಯನ್ನು ನಿಲ್ಲಿಸಬೇಕೆಂದು ಟೆಲಿಕಾಂ ಆಪರೇಟರ್‌ಗಳು ಈಗಾಗಲೇ ತಮ್ಮ ಗ್ರಾಹಕರನ್ನು ಎಚ್ಚರಿಸಲು ಆರಂಭಿಸಿದೆ.
ಮಾರ್ಚ್ 1ರಿಂದ ಮಾರ್ಚ್ 31ರೊಳಗೆ ಚೀನಿ ಹ್ಯಾಂಡ್ ಸೆಟ್‌ಗಳಿಗೆ ಸೇವೆ ಕಿತ್ತು ಹಾಕಬೇಕೆಂದು ಟೆಲಿಕಾಂ ಇಲಾಖೆ ಆಪರೇಟರ್‌ಗಳಿಗೆ ಗಡುವು ವಿಧಿಸಿತ್ತು. ಈಗ ಈ ಗಡುವನ್ನು ಮತ್ತೆ ಏಪ್ರಿಲ್ 13ರವರೆಗೆ ವಿಸ್ತರಿಸಲಾಗಿದೆ. |