ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಝೆರಾಕ್ಸ್‌ನಿಂದ ಎಚ್‌‌ಸಿಎಲ್ ಬಗಲಿಗೆ 100ಮಿ.ಡಾ.ಹೊರಗುತ್ತಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಝೆರಾಕ್ಸ್‌ನಿಂದ ಎಚ್‌‌ಸಿಎಲ್ ಬಗಲಿಗೆ 100ಮಿ.ಡಾ.ಹೊರಗುತ್ತಿಗೆ
ಭಾರತದ ಪ್ರತಿಷ್ಠಿತ ಎಚ್‌ಸಿಎಲ್ ಟೆಕ್ನಾಲಜಿ ಲಿಮಿಟೆಡ್‌ಗೆ ಆರು ವರ್ಷಗಳ ಕಾಲಾವಧಿಗೆ ಸುಮಾರು 100ಮಿಲಿಯನ್ ಡಾಲರ್‌ ಹೊರಗುತ್ತಿಗೆ ವ್ಯವಹಾರಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಝೆರಾಕ್ಸ್ ಕಾರ್ಪೋರೇಶನ್ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಎಚ್‌ಸಿಎಲ್ 19 ದೇಶಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಉತ್ಪಾದನೆಯಲ್ಲಿಯೂ ಗುಣಮಟ್ಟವನ್ನು ಕಾಯ್ದುಕೊಂಡಿರುವುದಾಗಿ ತಿಳಿಸಿದೆ. ಅಲ್ಲದೇ ಹಿಂದಿನ ಆರ್ಥಿಕ ವರ್ಷದಲ್ಲಿಯೂ ಅಮೆರಿಕ ಮಾರುಕಟ್ಟೆಯಲ್ಲಿಯೂ ಶೇ.57.4ರಷ್ಟು ವ್ಯವಹಾರ ಕುದುರಿಸಿರುವುದಾಗಿ ಹೇಳಿದೆ.

ಪ್ರಸಕ್ತವಾಗಿ ಮೈಕ್ರೋಸಾಫ್ಟ್ ನ ಆನ್ ಲೈನ್ ಸರ್ವೀಸ್ ಬಿಜಿನೆಸ್ ಟೆಕ್ನಾಲಜಿ ಸರ್ವೀಸ್ ಎಚ್‌‌ಸಿಎಲ್ ಕಂಪನಿ ಸೇವೆ ಒದಗಿಸುತ್ತಿದೆ. ಉಭಯ ಕಂಪನಿಗಳ ನಡುವೆ ಹೊಂದಿರುವ ಉತ್ತಮ ಬಾಂಧವ್ಯ ಹಾಗೂ ವಿಶ್ವಾಸದ ಹಿನ್ನೆಲೆಯಲ್ಲಿ ಮೈಕ್ರೋ ಸಾಫ್ಟ್ ಕಂಪನಿಯೂ ಎಚ್‌ಸಿಎಲ್ ಗೆ ಐದು ವರ್ಷ ಅವಧಿ ಪ್ರಾಜೆಕ್ಟ್ ನೀಡಿದೆ.

ಎಚ್ ಸಿಎಲ್ ಕಂಪನಿ ನಾಲ್ಕು ವಾರಗಳ ಅವಧಿಯಲ್ಲಿ ಮೂರು ಬೃಹತ್ ಯೋಜನೆಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರು ವರ್ಷಗಳ 100 ಮಿಲಿಯನ್ ಡಾಲರ್ ಜೆರಾಕ್ಸ್ ಯೋಜನೆ ಹಾಗೂ ರಿಜರ್ಸ್ ಡೈಜೆಸ್ಟ್ ಕಂಪನಿಯ 350 ಮಿಲಿಯನ್ ಡಾಲರ್ ಇನ್ನೊಂದು ದೊಡ್ಡ ಯೋಜನೆಯನ್ನು ಇತ್ತೀಚೆಗೆ ಪಡೆದುಕೊಂಡಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿ-20ರ ಆರ್ಥಿಕ ಬಿಕ್ಕಟ್ಟು ಕ್ರಮ ಪರಿಣಾಮಕಾರಿಯಲ್ಲ: ಹಿಂದುಜಾ
ಸತ್ಯಂ ವಂಚನೆ: ಮತ್ತೆ ಮೂವರ ಬಂಧನ
ಸತ್ಯಂ ರಾಜು ಮೇಲೆ ಮತ್ತೊಂದು ಮೊಕದ್ದಮೆ
ಇನ್ನಷ್ಟು ಬಡ್ಡಿ ದರ ಕಡಿತ ಸಾಧ್ಯತೆ
ಆರ್‌ಐಎಲ್-ಆರ್‌ಪಿಎಲ್ ವಿಲೀನಕ್ಕೆ ಅಸ್ತು
ಬರಲಿದೆ 11 ಅಂಕಿಗಳ ಮೊಬೈಲ್, ಸಿದ್ಧರಾಗಿ