ಚಿನ್ನದ ಬೆಲೆಯಲ್ಲಿಯ ಇಳಿತ ಸತತ ಐದನೆ ದಿನಕ್ಕೆ ಮುಂದುವರಿದಿದ್ದು, ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 340 ರೂಪಾಯಿ ಇಳಿಕೆ ಕಂಡಿದ್ದು, 14,420 ರೂಪಾಯಿಗಿಳಿದಿದೆ. ಜಾಗತಿಕ ದುರ್ಬಲ ಪ್ರವೃತ್ತಿಯ ಹಿನ್ನೆಲೆಯಲ್ಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ದಾಸ್ತಾನುಗಾರರ ಸ್ಥಿರ ಮಾರಾಟ ದೃಶ್ಯ ಕಂಡುಬರುತ್ತಿತ್ತು.ಜಾಗತಿಕ ಹಣಕಾಸು ಬಿಕ್ಕಟ್ಟು ಸರಳೀಕೃತಗೊಳ್ಳಬಹುದು ಎಂಬ ಊಹೆಯ ಹಿನ್ನೆಲೆಯಲ್ಲಿ ಹಳದಿ ಲೋಹದಲ್ಲಿ ಹೂಡಿಕೆಯ ಮೋಹದಲ್ಲಿ ಕಿಂಚಿತ್ತು ಕಮ್ಮಿಯಾಗಿರುವ ಕಾರಣ ಸ್ವರ್ಣಬೆಲೆ ಇಳಿಮುಖವಾಗಿದೆ ಹತ್ತುವಾರಗಳಲ್ಲೇ ಕನಿಷ್ಠ ದರಕ್ಕೆ ತಲುಪಿದೆ.ಕಳೆದ ಐದು ದಿನಗಳ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಒಟ್ಟು 1,020 ರೂಪಾಯಿ ಇಳಿಕೆಯಾಗಿದ್ದು ಫೆಬ್ರವರಿ 18ರಂದು ಇದ್ದ ಬೆಲೆಯ ಮಟ್ಟಕ್ಕೆ ಇಳಿದಿದೆ.ಕಳೆದ ವಾರ ಲಂಡನ್ನಿನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಹಿನ್ನೆಲೆಯಲ್ಲಿ ಆರ್ಥಿಕ ಹಿಂಸರಿತದಲ್ಲಿ ಚೇತರಿಕೆಯುಂಟಾಗಬಹುದು ಎಂಬುದು ಈ ದುರ್ಬಲ ಪ್ರವೃತ್ತಿಗೆ ಕಾರಣ ಎಂದು ಚಿನಿವಾರಪೇಟೆಯ ತಜ್ಞರು ಹೇಳಿದ್ದಾರೆ.ಕ್ಷಿಪ್ರಗತಿಯ ಲಾಭಾಂಶ ಗಳಿಸುವ ಹಿನ್ನೆಲೆಯಲ್ಲಿ ಹಣದ ಹರಿವು ಇದೀಗ ಹಳದಿ ಲೋಹದ ಗಟ್ಟಿಯಿಂದ ಶೇರು ಮಾರುಕಟ್ಟೆ ಹರಿಯುತ್ತಿದೆ ಎಂದು ನುಡಿದರು.ಇದೇವೇಳೆ ಬೆಳ್ಳಿಯ ಬೆಲೆಯಲ್ಲೂ ಕಿಲೋ ಒಂದರ 450 ರೂಪಾಯಿ ಕುಸಿದಿದ್ದು 20,950 ರೂಪಾಯಿಗಿಳಿದಿದೆ. |