ಹಣದುಬ್ಬರವು ಶೂನ್ಯದತ್ತ ಸಾಗಿರುವುದು ಮತ್ತು ಆರ್ಥಿಕ ಸ್ಥಿತಿಯಲ್ಲಿನ ಚೇತರಿಕೆಯ ವಿದ್ಯಮಾನದ ಹಿನ್ನೆಲೆಯಲ್ಲಿ ಸಾಲದರಗಳಲ್ಲಿ ಶೇಕಡಾ 0.5ರಷ್ಟು ಹಾಗೂ ಠೇವಣಿ ದರಗಳಲ್ಲಿ ಶೇಕಡಾ 0.5ರಿಂದ 0.75ರಷ್ಟು ಕಡಿತಗೊಳ್ಳಬಹುದು ಎಂಬ ಸುಳಿವನ್ನು ಭಾನುವಾರ ಬ್ಯಾಂಕರ್‌ಗಳು ನೀಡಿದ್ದಾರೆ.
ಮುಂಬರುವ ಎರಡ್ಮೂರು ವಾರಗಳಲ್ಲಿ ಸಾಲ ಹಾಗೂ ಠೇವಣಿ ದರ ಕಡಿತವಾಗಬಹುದು ಮತ್ತು ಬ್ಯಾಂಕುಗಳು ಬಡ್ಡಿದರಗಳನ್ನು ನಿಧಿಗಳ ವೆಚ್ಚಕ್ಕನುಸಾರವಾಗಿ ತಗ್ಗಿಸಬಹುದಾಗಿದೆ ಎಂದು ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಟಿ.ಎಸ್. ನಾರಾಯಣಸ್ವಾಮಿ ಹೇಳಿದ್ದಾರೆ.
ಸಾಲದರಗಳಲ್ಲಿ ಕಡಿತಗೊಳಿಸಲು ಪ್ರಸಕ್ತ ಸ್ಥೂಲಆರ್ಥಿಕ ಸ್ಥಿತಿಗಳು ಒಲವು ಸೂಚಿಸಿವೆ ಎಂದು ಬ್ಯಾಂಕ್ ಆಫ್ ಬರೋಡಾದ ಸಿಎಂಜಿ ಎಂ.ಡಿ. ಮಲ್ಯ ಅವರೂ ಅಭಿಪ್ರಾಯಿಸಿದ್ದಾರೆ. |