ಎರಡನೇ ವಿಶ್ವ ಸಮರದ ಬಳಿಕ ಇದೀಗ ಮತ್ತೆ ಜಾಗತಿಕವಾಗಿ ಬಿಕ್ಕಟ್ಟು ಸೃಷ್ಟಿಸಿರುವ ವಿಶ್ವ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಆರ್ಥಿಕ ಚೇತರಿಕೆಗೆ ನೂರು ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಆರ್ಥಿಕ ಉತ್ತೇಜಕ ಪ್ಯಾಕೇಜ್ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಪಾನ್ ತಿಳಿಸಿದೆ.
ದೇಶದ ಆರ್ಥಿಕ ಹಿಂಜರಿಕೆ ಚೇತರಿಕೆಗಾಗಿ ವ್ಯವಸ್ಥಿತ ಕ್ರಮ ಕೈಗೊಳ್ಳುವಂತೆ ಜಪಾನ್ ಪ್ರಧಾನಮಂತ್ರಿ ತಾರೋ ಅಸೋ ವಿತ್ತ ಸಚಿವ ಕಾರೂ ಯೂಸಾನೋ ಅವರಿಗೆ ನಿರ್ದೇಶನ ನೀಡಿದ್ದಾರೆ.
ಕಳೆದ ತಿಂಗಳು ಪ್ರಧಾನಿ ಅಸೋ ಅವರು ಆರ್ಥಿಕ ಉತ್ತೇಜನಕ್ಕೆ ಪ್ಯಾಕೇಜ್ ಘೋಷಿಸುವುದಾಗಿ ಹೇಳಿಕೆ ನೀಡಿದ್ದರಾದರೂ ಕೂಡ ಎಷ್ಟು ಮೊತ್ತದ ಹಣ ಎಂಬುದನ್ನು ಬಹಿರಂಗಪಡಿಸಿಲ್ಲವಾಗಿತ್ತು. ಎರಡನೇ ವಿಶ್ವ ಸಮರದ ಸಂದರ್ಭದಲ್ಲಿ ಜಪಾನ್ ಆರ್ಥಿಕವಾಗಿ ಸಂಪೂರ್ಣ ಕಂಗೆಟ್ಟಿದ್ದು, ಇದೀಗ ಎರಡನೇ ಬಾರಿ ಜಾಗತಿಕ ಆರ್ಥಿಕ ಹಿಂಜರಿತದ ಬಿಸಿ ಜಪಾನ್‌ಗೂ ತಟ್ಟಿದ್ದು ಬಿಕ್ಕಟ್ಟಿಗೆ ಸಿಲುಕುವಂತಾಗಿತ್ತು.
|