ನವದೆಹಲಿ: ಜಾಗತಿಕ ಆರ್ಥಿಕ ಕುಸಿತವಿದ್ದರೂ ಭಾರತದಲ್ಲಿ ಈ ವರ್ಷ ಶೇ.7.3ರಷ್ಟು ಸಂಬಳದ್ಲಲಿ ಏರಿಕೆಯಾಗಲಿದೆ ಎಂದು ಜಾಗತಿಕ ಮಾನವ ಸಂಪನ್ಮೂಲ ಸಂಸ್ಥೆ ಹೇ ಗ್ರೂಪ್ ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿದೆ. ಭಾರತ ಆರ್ಥಿಕ ಕುಸಿತದ ಪರಿಣಾಮವನ್ನು ಅನುಭವಿಸುತ್ತಿದ್ದರೂ, ಭಾರತೀಯ ಕಂಪನಿಗಳು ಇನ್ನೂ ಪ್ರತಿಭೆಗಳಿಗೆ ಸರಿಯಾದ ಮಾನದಂಡ ನೀಡುತ್ತಿವೆ. ಆರ್ಥಿಕವಾಗಿ ಬೆಳೆಯುತ್ತಿರುವ ರಾಷ್ಟ್ರಗಳಾದ ಭಾರತ, ಚೀನಾಗಳಲ್ಲಿ ಸಂಬಳದಲ್ಲಿ ಏರಿಕೆ ಸಾಧ್ಯವಿದೆ ಎಂದು ವರದಿ ಹೇಳಿದೆ. |