ಮುಂಬೈ: ಗೋಏರ್ ಸಂಸ್ಥೆಯ ಸಿಇಒ ಎಡ್ಗಾರ್ಡಿ ಬಾಡಿಯಾಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವೈಮಾನಿಕ ಕ್ಷೇತ್ರದ ಸಂಸ್ಥೆಗಳಲ್ಲಿ ಇಂತಹ ಹಿರಿಯ ಹುದ್ದೆಗೆ ರಾಜೀನಾಮೆ ಕೊಟ್ಟು ಹೊರನಡೆಯುತ್ತಿರುವುದು ಇದು ಎರಡನೇ ಬಾರಿ. ಕಳೆದ ತಿಂಗಳು ಗೋಏರ್‌ನ ಸಿಎಫ್ಒ ಜಿ.ಪಿ.ಗುಪ್ತಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸ್ಪೈಸ್ ಜೆಟ್ ಸಂಸ್ಥೆಗೆ ಸೇರಿದ್ದರು. ಗೋಏರ್‌ಲೈನ್ಸ್ ತನ್ನ ಹಿರಿಯ ಹುದ್ದೆಗಳನ್ನು ಪುನರ್ ಸ್ಥಾಪಿಸಲು ಹೊರಟಿದ್ದು, ಅದರ ಫಲವೇ ಈ ಇಬ್ಬರು ಹಿರಿಯರ ರಾಜೀನಾಮೆ ಎಂದು ಸಂಸ್ಥೆ ಹೇಳಿಕೊಂಡಿದೆ. |