ಜನಸಾಮಾನ್ಯರ ಕಾರು ಎಂಬ ಹೆಗ್ಗಳಿಕೆಯೊಂದಿಗೆ ಬಹು ಜನಪ್ರಿಯತೆ ಪಡೆದಿರುವ ಟಾಟಾದ 1ಲಕ್ಷ ರೂಪಾಯಿಯ 'ನ್ಯಾನೋ' ಇದೀಗ ಕಳೆದ ಮೂರು ದಿನಗಳಲ್ಲಿಯೇ ಬುಕ್ಕಿಂಗ್‌ಗಾಗಿ 51ಸಾವಿರ ಅರ್ಜಿ ಮಾರಾಟ ಮಾಡಿರುವುದಾಗಿ ಹೇಳಿದೆ.
ಏಪ್ರಿಲ್ 4ರಿಂದ ಅಧಿಕೃತವಾಗಿ ನ್ಯಾನೋ ಮಾರಾಟಕ್ಕಾಗಿ ಬುಕ್ಕಿಂಗ್ ಆರಂಭಿಸಿದ್ದು, ಕಳೆದ ಮೂರು ದಿನಗಳಲ್ಲಿ 218 ಡೀಲರ್‌ಶಿಪ್ಸ್‌ಗಳಲ್ಲಿ 51ಸಾವಿರ ಅರ್ಜಿಗಳು ಮಾರಾಟವಾಗಿರುವುದಾಗಿ ಟಾಟಾ ಕಂಪೆನಿ ಮೂಲಗಳು ತಿಳಿಸಿವೆ.
ನ್ಯಾನೋ ಕಾರಿಗೆ ಪ್ರತಿದಿನ ಬೇಡಿಕೆ ಹೆಚ್ಚಾಗುತ್ತಲೇ ಇದೆ, ಈ ನಿಟ್ಟಿನಲ್ಲಿ ಕಂಪೆನಿಯ ನ್ಯಾನೋ ಕಾರಿನ ಬೇಡಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಟಾಟಾ ಮೋಟಾರ್ಸ್ ವಕ್ತಾರ, ಆ ಬಗ್ಗೆ ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದರು.
ನ್ಯಾನೋ ಬುಕ್ಕಿಂಗ್ ಅರ್ಜಿಯನ್ನು ಕೇವಲ ಟಾಟಾ ಮೋಟಾರ್ಸ್ ಡೀಲರ್‌ಶಿಪ್ಸ್ ಮಾತ್ರ ಅಧಿಕೃತವಾಗಿ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದ ಅವರು, ಬೇರಾವುದೇ ಮಾರಾಟಗಾರರಿಗೆ ಅದರ ಹಕ್ಕನ್ನು ನೀಡಿಲ್ಲ ಎಂದರು.
ಮಾರ್ಚ್ 23ರಂದು ನ್ಯಾನೋವನ್ನು ಮಾರುಕಟ್ಟೆಗೆ ಪರಿಚಯಿಸಿದ ಟಾಟಾ, ಏಪ್ರಿಲ್ 9ರಿಂದ 25ರವರೆಗೆ ನ್ಯಾನೋ ಬುಕ್ಕಿಂಗ್ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಮೂರು ದಿನಗಳಲ್ಲಿ 51ಸಾವಿರ ಅರ್ಜಿ ಮಾರಾಟವಾಗುವ ಮೂಲಕ ಅಪಾರ ಬೇಡಿಕೆಯ ಮುನ್ಸೂಚನೆ ದೊರೆತಂತಾಗಿದೆ. |