ಹೇಗಾದರೂ ಮಾಡಿ ತಮ್ಮ ಮಗಳನ್ನು ವಿದೇಶದಲ್ಲಿ ಉದ್ಯೋಗ ಹೊಂದಿರುವ ಒಂದೊಬ್ಬ ಒಳ್ಳೆಯ ವರನಿಗೆ ಕೊಟ್ಟು ಮದವೆ ಮಾಡಿ ಭಾರ ಕಳಕೊಳ್ಳಬೇಕು ಎಂಬುದು ಹೆಚ್ಚಿನ ಹೆತ್ತವರ ಕನಸು. ಇತ್ತೀಚಿನ ವರ್ಷಗಳಲ್ಲಿ ಎನ್ನಾರೈವರಗಳು ಮಾಡುತ್ತಿರುವ ವಂಚನೆ ಸರಣಿಯಂತೆ ಬೆಳಕಿಗೆ ಬರುತ್ತಿರುವಂತೆ, ಈ ಕ್ರೇಜ್ ಒಂದಿಷ್ಟು ಕಮ್ಮಿಯಾಗಿತ್ತಾದರೂ, ಇದೀಗ ವಿಶ್ವವನ್ನು ಕಾಡುತ್ತಿರುವ ಆರ್ಥಿಕ ಹಿಂಸರಿತವು ಎನ್ನಾರೈ(ಅನಿವಾಸಿ ಭಾರತೀಯ) ವರಗಳ ಬೇಡಿಕ ಶೇ. 20ರಷ್ಟು ಕುಸಿಯುವಂತೆ ಮಾಡಿದೆಯಂತೆ. ಹೀಗಾಗಿ ಇದೀಗ ಹೆಣ್ಣು ಹೆತ್ತವರು ಸುಭದ್ರ ಉದ್ಯೋಗ ಹೊಂದಿರುವ ಸರ್ಕಾರಿ ಉದ್ಯೋಗಿಗಳ ಹುಡುಕಾಟಕ್ಕಿಳಿದಿದ್ದಾರೆ.
ಖಾಸಗೀ ಸಂಸ್ಥೆಯಲ್ಲಿ ಉದ್ಬವಿಸಿರುವ ಅನಿಶ್ಚಿತತೆ ಪರಿಸ್ಥಿತಿಯು ಎನ್ನಾರೈ ವರಗಳ ಬೇಡಿಕೆ ಕುಸಿಯುವಂತೆ ಮಾಡಿದೆ ಎಂಬುದಾಗಿ ಭಾರತ್ ಮ್ಯಾಟ್ರಿಮೊನಿ ಎಂದು ಪ್ರಸಿದ್ಧವಾಗಿರುವ ಕಾನ್ಸಿಮ್ ಇನ್ಫೋ ಪ್ರೈವೇಟ್ ಲಿಮಿಟ್ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯಕಾರ್ಯನಿರ್ವಣಾಧಿಕಾರಿ ಮುರುಗವೇಲ್ ಜಾನಕಿರಾಮನ್ ಹೇಳಿದ್ದಾರೆ.
ಸಿಂಪ್ಲಿಮ್ಯಾರಿ ಡಾಟ್ ಕಾಮ್‌ನ ಸಂದೀಪ್ ಅಮರ್ ಅವರೂ ಸಹ ಇದಕ್ಕೆ ಪೂರಕವೆಂಬಂತಹ ಪ್ರತಿಕ್ರಿಯೆಯನ್ನು ನೀಡುತ್ತಾ, ಅನಿಶ್ಚಿತತೆಯಿಂದಾಗಿ ಎನ್ನಾರೈ ವರಗಳ ಬೇಡಿಕೆಯಲ್ಲಿ ಸುಮಾರು ಶೇ.20ರಷ್ಟು ಇಳಿಕೆಯಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ಶಾದಿ ಡಾಟ್ ಕಾಮ್‌ನ ಅಂಕಿ ಅಂಶಗಳೂ ಇದನ್ನೇ ಹೇಳುತ್ತವೆ. ಬ್ರಿಟನ್ನಿನ ವರಗಳಿಗೆ ಗುಜರಾತಿಗಳು ನಡೆಸುತ್ತಿದ್ದ ಹುಟುಕಾಟವು ಕಳೆದೊಂದು ವರ್ಷದಲ್ಲಿ ಶೇ.3.5ರಷ್ಟು ಇಳಿಕೆಯಾಗಿದೆ. ಇದೇ ಸಂಖ್ಯೆಯು ಸಿಂಧಿಗಳಲ್ಲಿ ಜನವರಿ 2008ಕ್ಕೆ ಹೋಲಿಸಿದರೆ 2009ರ ಜನವರಿಯಲ್ಲಿ ಶೇ. 7.4ರಷ್ಟು ಇಳಿದಿದೆ.
ಇದೇ ರೀತಿ ಅಮೆರಿಕ ಮೂಲದ ಎನ್ನಾರೈಗಳ ಬೇಡಿಕೆ ಶೇ. 7.10ರಷ್ಟು ಇಳಿದಿದೆ. ಅಮೆರಿಕದ ವರನನ್ನು ಬಯಸುತ್ತಿದ್ದ ತೆಲುಗು ಆಕಾಂಕ್ಷಿಗಳ ಸಂಖ್ಯೆಯಲ್ಲಿ ಶೇ.6.2ರಷ್ಟು ಇಳಿಕೆಯಾಗಿದೆ. 2006-2007ರಲ್ಲಿ ಎನ್ನಾರೈ ವರಗಳ ಹುಡುಕಾಟ ಉತ್ತುಂಗಕ್ಕೇರಿತ್ತು.
ಆದರೆ, ಇದೀಗ ಹೊರದೇಶದಲ್ಲಿ ದುಡಿಯುವ ವರಗಳಿಗಿಂತ ನಮ್ಮದೇಶದಲ್ಲಿ ಸರ್ಕಾರಿ ಉದ್ಯೋಗ ಹೊಂದಿರುವ ವರಗಳೇ ಆಗಬಹುದು ಎಂಬ ನಿರ್ಧಾರದತ್ತ ಮರಳುತ್ತಿದ್ದಾರೆ ಎಂಬುದಾಗಿ ಮದುವೆ ಮಾರುಕಟ್ಟೆಯ ಅಂಕಿ ಅಂಶಗಳು ಹೇಳುತ್ತಿವೆ.
|