ಸತ್ಯಂ ಕಂಪ್ಯೂಟರ್ ಸಂಸ್ಥೆಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸ್ಥಾಪಕ ಬಿ.ರಾಮಲಿಂಗರಾಜು ಹಾಗೂ ವಡ್ಲಾಮಣಿ ಶ್ರೀನಿವಾಸ ಸೇರಿದಂತೆ ಉಳಿದ ನಾಲ್ವರ ವಿರುದ್ಧ ಸಿಬಿಐ ಮಂಗಳವಾರ ನ್ಯಾಮ್‌ಪಲ್ಲಿ ನ್ಯಾಯಾಲಕ್ಕೆ ಸುಮಾರು 25 ಸಾವಿರ ಪುಟಗಳ ಚಾರ್ಜ್‌ಶೀಟ್ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಐಟಿ ಕಂಪೆನಿಯ ಬೃಹತ್ ವಂಚನೆಯ ಪ್ರಕರಣದ ಬಗ್ಗೆ ತನಿಖೆ ನಡೆಸಿರುವ ಸಿಬಿಐ ಇಂದು ನ್ಯಾಯಾಲಯಕ್ಕೆ 1532 ಓರಿಜಿನಲ್ ದಾಖಲಾತಿಯೊಂದಿಗೆ ಚಾರ್ಚ್‌ಶೀಟ್ ಸಲ್ಲಿಸಿದೆ.ಸತ್ಯಂ ಸ್ಥಾಪಕ ರಾಮಲಿಂಗರಾಜು, ವಡ್ಲಾಮಣಿ ಶ್ರೀನಿವಾಸ್, ಪಿಡ್ಲ್ಯುಡಿಸಿ ಸಂಸ್ಥೆಯ ಇಬ್ಬರು ಅಧಿಕಾರಿಗಳು ಸೇರಿದಂತೆ ಹಲವರ ಮೇಲೆ ವಂಚನೆ ಪ್ರಕರಣ ದಾಖಲಿಸಿ ಆರೋಪ ಪಟ್ಟಿ ನೀಡಿದೆ. ಅಲ್ಲದೇ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆಗೆ ಮುನ್ನ ನ್ಯಾಯಾಲಯದಿಂದ ಜಾಮೀನು ಪಡೆಯುವ ಯತ್ನಕ್ಕೆ ಸಿಬಿಐ ತಡೆ ಹಾಕಿತ್ತು.ತನಿಖೆ ವೇಳೆಯಲ್ಲಿ ಸತ್ಯಂನ ರಾಮಲಿಂಗರಾಜು ಅವರು ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ಸೇರಿದಂತೆ ಹಲವು ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಸಿಬಿಐ ವಿವರಿಸಿದೆ. ಸತ್ಯಂ ವಂಚನೆ ಬಹಿರಂಗಗೊಂಡ ನಂತರ ಸಂಸ್ಥೆಯ ಸ್ಥಾಪಕ ರಾಮಲಿಂಗರಾಜುವನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಹಲವರನ್ನು ಬಂಧಿಸಲಾಗಿತ್ತು. ಅಲ್ಲದೇ ತನಿಖೆ ವೇಳೆ ನೀಡಿದ ಮಾಹಿತಿ ಮೇರೆಗೆ ಸುಮಾರು 25ಟ್ರಂಕ್‌ಗಳಷ್ಟು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ರಾಮಲಿಂಗರಾಜುವಿನ ಮನೆ ಮತ್ತು ಕಚೇರಿಯಿಂದ ವಶಪಡಿಸಿಕೊಂಡ ದಾಖಲೆಗಳು ಮತ್ತು ಹಾರ್ಡ್ ಡಿಸ್ಕ್‌ಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿತ್ತು.ತನಿಖೆಗಾಗಿ ನ್ಯಾಷನಲ್ ಇನ್‌ಫಾರ್ಮೆಟಿಕ್ ಸೆಂಟರ್(ಎನ್‌ಐಸಿ)ನ ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಸಹಕರಿಸಿದ್ದರು. |