ರಷ್ಯಾ ಮೂಲದ ಎಸ್ಸಾರ್ ಸ್ಟೀಲ್ ಕಂಪೆನಿ ಪ್ರಥಮ ಹಂತದ ಸ್ಟೀಲ್ ಉತ್ಪಾದನೆಯನ್ನು ಮಿನ್ನೆಸೋಟಾ ಸ್ಟೀಲ್ ಪ್ಲ್ಯಾಂಟ್‌ನಲ್ಲಿ 2011ರಲ್ಲಿ ಆರಂಭಿಸಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಎಸ್ಸಾರ್ ಸ್ಟೀಲ್ ಮಿನ್ನೆಸೋಟಾ ಕಂಪೆನಿಯ ಅಂಗಸಂಸ್ಥೆಯಾಗಿರುವ ಎಸ್ಸಾರ್ ಸ್ಟೀಲ್ ಹೋಲ್ಡಿಂಗ್ಸ್ ಲಿಮಿಟೆಡ್ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದು, 2011ರಲ್ಲಿ ತನ್ನ ಸ್ಟೀಲ್ ಉತ್ಪಾದನೆ ಕಾರ್ಯವನ್ನು ಆರಂಭಿಸಲಿದೆ. ಈಗಾಗಲೇ 1.1 ಅಮೆರಿಕನ್ ಬಿಲಿಯನ್ ಡಾಲರ್‌ನಷ್ಟು ಸ್ಟೀಲ್ ಉತ್ಪಾದನೆಗೆ ಬೇಡಿಕೆ ಬಂದಿದ್ದು, ಆ ಕಾರಣಕ್ಕಾಗಿ ಉತ್ಪಾದನೆ ಆರಂಭಿಸುತ್ತಿರುವುದಾಗಿ ಸಂಸ್ಥೆ ಹೇಳಿದೆ.
ಎಸ್ಸಾರ್ ಕಂಪೆನಿ ಈಗಾಗಲೇ ಹಲವಾರು ಮೈಲಿಗಲ್ಲನ್ನು ನೆಟ್ಟಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ, ಆ ನಿಟ್ಟಿನಲ್ಲಿ ಕಂಪೆನಿ ಇನ್ನು ಮುಂದೆಯೂ ಉತ್ತಮ ಸೇವೆಯನ್ನು ನೀಡಲಿದೆ ಎಂದು ಎಸ್ಸಾರ್ ಸ್ಟೀಲ್ ಮಿನ್ನೆಸೋಟಾದ ಅಧ್ಯಕ್ಷ ಹಾಗೂ ಸಿಇಓ ಆಗಿರುವ ಮಾಧು ಯುಪ್ಪುಲುರಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಉತ್ಪಾದಿತ ವಸ್ತುಗಳಿಗೆ ಎದುರಾಗುವ ಮಾರುಕಟ್ಟೆ ಸಮಸ್ಯೆ ಬಗ್ಗೆ ಎಸ್ಸಾರ್ ಕಂಪೆನಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕಂಪೆನಿ ಅಭಿಪ್ರಾಯ ವ್ಯಕ್ತಪಡಿಸಿದೆ. |