ದೇಶಾದ್ಯಂತ ಬ್ರಾಡ್‌ಬ್ಯಾಂಡ್ ನೆಟ್ ವರ್ಕ್ ಯೋಜನೆಗಾಗಿ 30ಬಿಲಿಯನ್ ಡಾಲರ್‌ನಷ್ಟು ಹಣವನ್ನು ವಿನಿಯೋಗಿಸುವುದಾಗಿ ಆಸ್ಟ್ರೇಲಿಯ ಪ್ರಧಾನಿ ಕೇವಿನ್ ರುಡ್ಡ್ ಮಂಗಳವಾರ ಘೋಷಿಸಿದ್ದು, ಇದು ದೇಶದ ಐತಿಹಾಸಿಕವಾದ ಪ್ರಮುಖ ಯೋಜನೆಯಾಗಿದೆ ಎಂದು ಬಣ್ಣಿಸಿದರು.
ಬ್ರಾಡ್‌ಬ್ಯಾಂಡ್ ಯೋಜನೆ ಅನುಷ್ಠಾನಕ್ಕಾಗಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಆಸ್ಟ್ರೇಲಿಯ ಸರ್ಕಾರ ಕಾರ್ಯಪ್ರವೃತ್ತವಾಗಲಿದೆ ಎಂದು ತಾನು ಘೋಷಿಸಿರುವುದಾಗಿ ರುಡ್ಡ್ ಹೇಳಿದರು.
ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆ ಹಿನ್ನೆಲೆಯಲ್ಲಿ ಈ ನೆಟ್‌ವರ್ಕ್ ಸೌಲಭ್ಯವನ್ನು ದೇಶಾದ್ಯಂತ ಕಲ್ಪಿಸಲು ಮುಂದಾಗಿರುವುದಾಗಿ ತಿಳಿಸಿದರು. ಚುನಾವಣೆ ಸಂದರ್ಭದಲ್ಲಿ ರುಡ್ಸ್ ಸೆಂಟರ್ ಹಾಗೂ ಲೆಫ್ಟ್ ಲೇಬರ್ ಸರ್ಕಾರ ಜಂಟಿಯಾಗಿ ದೇಶಾದ್ಯಂತ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿತ್ತು.
ನ್ಯಾಶನಲ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್‌ನ ಪ್ರಾಮುಖ್ಯತೆಯನ್ನು ಸರ್ಕಾರ ಅರಿತುಕೊಂಡಿದ್ದು, ನೂತನ ನೆಟ್‌ವರ್ಕ್ ಶೀಘ್ರ ಗತಿಯಲ್ಲಿ ಲಭಿಸಲಿದೆ ಎಂದು ರುಡ್ ಹೇಳಿದರು. |