ಸುಮಾರು ಎರಡು ವರ್ಷದ ವಿಳಂಬದ ಬಳಿಕ ಭಾರತವು ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದ ಪೂರೈಕೆಯನ್ನು ಬರುವ ವರ್ಷದ ಜೂನ್ ತಿಂಗಳಲ್ಲಿ ಪಡೆಯಲಿದೆ. "ಮೊದಲ 787 ವಿಮಾನವನ್ನು 2010ರ ವೇಳೆಗೆ ಪೂರೈಕೆ ಮಾಡಲಾಗುವುದು" ಎಂಬುದಾಗಿ ಬೋಯಿಂಗ್ ಇಂಟರ್‌ನ್ಯಾಶನಲ್‌ನ ಉಪಾಧ್ಯಕ್ಷ ದಿನೇಶ್ ಕೇಸ್ಕಾರ್ ತಿಳಿಸಿದ್ದಾರೆ.
ಡ್ರೀಮ್ ಲೈನರ್ ಎಂಬ ಹೆಸರಿನ ವಿಮಾನವು 2010ರ ಮೊದಲ ತ್ರೈಮಾಸಿಕದಲ್ಲಿ ತನ್ನ ಸೇವೆ ಆರಂಭಿಸಲಿದೆ ಎಂದು ಅವರು ಹೇಳಿದ್ದಾರೆ. ಜಪಾನಿನ ನಿಪ್ಪಾನ್ ಏರೇವೇಸ್ ಅನಾವರಣ ಗ್ರಾಹಕವಾಗಿದೆ ಎಂದೂ ಅವರು ತಿಳಿಸಿದರು.
ಮೊದಲ ಆರು ವಿಮಾನಗಳು ಇದೀಗ ಉತ್ಪಾದನೆ ವಿವಿಧ ಹಂತಗಳಲ್ಲಿ ಇದ್ದು, ಅಮೆರಿಕದ ಎವೆರೆಟ್‌ನಲ್ಲಿ ಸ್ಥಾವರದಲ್ಲಿ ಪರೀಕ್ಷಾ ಹಾರಾಟ ನಡೆಸಲಿವೆ. 58 ಏರ್‌ಲೈನ್‌ಗಳು 895 ವಿಮಾನಗಳಿಗೆ ಬೇಡಿಕೆ ಸಲ್ಲಿಸಿವೆ. ಇದರಲ್ಲಿ ಏರ್ ಇಂಡಿಯಾ 27 ವಿಮಾನಕ್ಕೆ ಬೇಡಿಕೆ ಸಲ್ಲಿಸಿದ್ದರೆ, ಜೆಟ್ ಏರ್‌ವೇಸ್ 10 ವಿಮಾನಗಳ ಬೇಡಿಕೆ ಇರಿಸಿದೆ. |