ವಿಪ್ರೋ ಇನ್ಫೋಟೆಕ್ ಭಾರತದ ನಂ-1 ಗ್ರೀನ್ ಬ್ರ್ಯಾಂಡ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದಾಗಿ ತಿಳಿಸಿರುವ ವಿಪ್ರೋ, ಅಲ್ಲದೆ ವಿಶ್ವದ ಐದು ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ ಎಂದು ತಿಳಿಸಿದೆ.
ಎನ್ವಾವರ್‌ಮೆಂಟಲ್ ಆರ್ಗೈನೈಸೇಶನ್ ಗ್ರೀನ್‌ಪೀಸಸ್‌ನ 'ಗೈಡ್ ಟು ಗ್ರೀನರ್ ಇಲೆಕ್ಟ್ರಾನಿಕ್ಸ್ ರಾಂಕಿಂಗ್' ಬಿಡುಗಡೆಗೊಳಿಸಿರುವ ರಾಂಕಿಂಗ್ ಪಟ್ಟಿಯಲ್ಲಿ ವಿಪ್ರೋ ಪ್ರಥಮ ಸ್ಥಾನ ಪಡೆದುಕೊಂಡಿದೆ.
ವಿಪ್ರೋ ಕೇವಲ ಭಾರತದ ಐಟಿ ಬ್ರ್ಯಾಂಡ್‌ಗಳಲ್ಲಿ ಮಾತ್ರ ಮೊದಲ ಸ್ಥಾನ ಪಡೆದಿದ್ದಲ್ಲದೇ, ಜಾಗತಿಕ ಗ್ರೀನ್ ಬ್ರ್ಯಾಂಡ್‌ಗಳಲ್ಲಿ ಐದನೇ ಸ್ಥಾನ ಅಲಂಕರಿಸಿರುವುದಾಗಿ ಕಂಪೆನಿ ಪ್ರಕಟಣೆಯಲ್ಲಿ ಹೇಳಿದೆ. ಆ ನಿಟ್ಟಿನಲ್ಲಿ ಕಂಪೆನಿ ಎಂದಿನಂತೆ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಮತ್ತಷ್ಟು ರುಚಿಕರವಾದ ಹಾಗೂ ಬ್ರ್ಯಾಂಡ್‌ನ ವಸ್ತುಗಳನ್ನೇ ನೀಡುವುದಾಗಿ ಕಂಪೆನಿ ವಿವರಿಸಿದೆ.
ಗ್ರೀನ್ ಪೀಸ್ ನಡೆಸಿರುವ ನೂತನ ಸಮೀಕ್ಷೆ ಆಧಾರದ ಮೇಲೆ ವಿಪ್ರೋಗೆ ಈ ಸ್ಥಾನ ದೊರೆತಿರುವುದಾಗಿ ವಿಪ್ರೋ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಅಶೋಕ್ ತ್ರಿಪಾಠಿ ತಿಳಿಸಿದ್ದಾರೆ. |