ಲಂಡನ್: ಈ ಬೇಸಿಗೆ ಕೊನೆಯವರೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರಲಿದ್ದು, ನಂತರ ಏರುತ್ತಾ ಹೋಗಲಿದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ಒಂದು ಔನ್ಸ್ (28.35 ಗ್ರಾಂ) ಚಿನ್ನಕ್ಕೆ 900 ಡಾಲರ್ (45 ಸಾವಿರ ರೂ)ಗಿಂತ ಬೆಲೆ ಇಳಿಯಲಿದ್ದು, ನಂತರ ಒಂದು ಸಾವಿರ ಡಾಲರ್‌ಗಿಂತ ಏರಿಕೆಯಾಗಲಿದೆ. ಇದು 1,100 ಡಾಲರ್‌ಗಿಂತಲೂ ಏರುವ ಸಂಭವವಿದ್ದು, ಬೇಸಿಗೆಯಲ್ಲಿ ಕಡಿಮೆ ಬೇಡಿಕೆ ಹಾಗೂ ಹಣದುಬ್ಬರ ಒತ್ತಡದಿಂದಾಗಿ ಚಿನ್ನದ ಬೆಲೆ ಬೇಸಿಗೆಯಲ್ಲಿ ಇಳಿಕೆಯಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ. |