ಬಹುಕೋಟಿ ಅವ್ಯವಹಾರಕ್ಕೀಡಾಗಿರುವ ಸತ್ಯಂ ಕಂಪ್ಯೂಟರ್ಸ್ ಕಂಪೆನಿಯ ಮಾರಾಟ ಪ್ರಕ್ರಿಯೆಯನ್ನು ಹೊಸ ಸರ್ಕಾರದ ರಚನೆ ಹಾಗೂ ಸಿಬಿಐ ತನಿಖೆ ಪೂರ್ಣಗೊಳ್ಳುವ ತನಕ ತಡೆಹಿಡಿಯಬೇಕು ಎಂಬುದಾಗಿ ಮಾಹಿತಿ ತಂತ್ರಜ್ಞಾನ ಹಾಗೂ ಬಿಪಿಒ ಉದ್ಯೋಗಿಗಳ ಒಕ್ಕೂಟವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶೇಖರ್ ಅವರು ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲ ಸ್ವಾಮಿ ಅವರಿಗೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದಾರೆ.
'ಸದ್ಯದ ಚುನಾವಣೆ ಮುಗಿದು ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗುವ ತನಕ ಹಾಗೂ ಸಿಬಿಐ ತನಿಖೆ ಪೂರ್ಣಗೊಳ್ಳುವ ತನಕ ಸತ್ಯಂ ಮಾರಾಟ ಪ್ರಕ್ರಿಯೆ ತಡೆಯಲು ಮಧ್ಯಪ್ರವೇಶಿಸಬೇಕು ಎಂದು ಚುನಾವಣೆ ಆಯೋಗವನ್ನು ವಿನಂತಿಸಿದ್ದೇವೆ" ಎಂದು ಅವರ ತಿಳಿಸಿದ್ದಾರೆ. |