ಸತ್ಯಂ ಸಂಸ್ಥೆಯ ಸ್ಥಾಪಕ ಬಿ.ರಾಮಲಿಂಗಾರಾಜು ಸೇರಿದಂತೆ ನಾಲ್ವರ ವಿರುದ್ದ ಸಿಬಿಐ ಮಂಗಳವಾರ ಚಾರ್ಜ್‌ಶೀಟ್ ಸಲ್ಲಿಸಿದ್ದು, ಈ ಬಹುಕೋಟಿ ಹಗರಣ ನಡೆಸಿದ ರಾಮಲಿಂಗಾರಾಜುಗೆ ಭಾರತೀಯ ದಂಡ ಸಂಹಿತೆ 467ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಆಗುವ ಸಾಧ್ಯತೆ ಇರುವುದಾಗಿ ತಿಳಿಸಿದೆ.ದೇಶಾದ್ಯಂತ ತೀವ್ರ ಕೋಲಾಹಲ ಸೃಷ್ಟಿಸಿದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ರಾಜು ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳನ್ವಯ ಮಂಗಳವಾರ ನ್ಯಾಯಾಲಯಕ್ಕೆ 65ಸಾವಿರ ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಸಿತ್ತು.ರಾಮಲಿಂಗರಾಜು, ವಡ್ಲಾಮಣಿ ಶ್ರೀನಿವಾಸ್, ಪಿಡ್ಲ್ಯುಡಿಸಿ ಸಂಸ್ಥೆಯ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ಆರೋಪ ಪಟ್ಟಿ ನೀಡಿತ್ತು. ಅಲ್ಲದೇ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆಗೆ ಮುನ್ನ ನ್ಯಾಯಾಲಯದಿಂದ ಜಾಮೀನು ಪಡೆಯುವ ಯತ್ನಕ್ಕೆ ಸಿಬಿಐ ತಡೆ ಹಾಕಿತ್ತು.ತನಿಖೆ ವೇಳೆಯಲ್ಲಿ ಸತ್ಯಂನ ರಾಮಲಿಂಗರಾಜು ಅವರು ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ಸೇರಿದಂತೆ ಹಲವು ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಸಿಬಿಐ ವಿವರಿಸಿತ್ತು. ಅಲ್ಲದೇ ರಾಮಲಿಂಗಾರಾಜು ಅವರು ನೀಡಿದ ಮಾಹಿತಿಯಂತೆ ಸತ್ಯಂ ನೌಕರರಾದ ಜಿ.ರಾಮಕೃಷ್ಣಾ, ಡಿ.ವೆಂಕಟಪತಿರಾಜು ಹಾಗೂ ಶ್ರೀಶೈಲಂ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ ಎಂದು ಸಿಬಿಐ ಹೇಳಿದೆ. ರಾಜುವಿನ ಮತ್ತೋರ್ವ ಸಹೋದರ ಸೂರ್ಯನಾರಾಯಣ ರಾಜು ಹೆಸರು ಕೂಡ ಸೇರಿದೆ. |